ಬೀದರ್: ಬಿಜೆಪಿ ಮುಖಂಡ, ಯೋಗ ಶಿಕ್ಷಕ ಧೋಂಡಿರಾಮ ಚಾಂದಿವಾಲೆ ಅವರ ಮೃತದೇಹ ಮಹಾರಾಷ್ಟ್ರದ ಉಮರ್ಗಾ ರಾಷ್ಟ್ರೀಯ ಹೆದ್ದಾರಿ ಪಕ್ಕ ಪತ್ತೆಯಾಗಿದೆ.
ಬೀದರ್: ಬಿಜೆಪಿ ಮುಖಂಡ, ಯೋಗ ಶಿಕ್ಷಕ ಧೋಂಡಿರಾಮ ಚಾಂದಿವಾಲೆ ಅವರ ಮೃತದೇಹ ಮಹಾರಾಷ್ಟ್ರದ ಉಮರ್ಗಾ ರಾಷ್ಟ್ರೀಯ ಹೆದ್ದಾರಿ ಪಕ್ಕ ಪತ್ತೆಯಾಗಿದೆ.
ಮೃತದೇಹದ ಜೇಬಿನಲ್ಲಿ ದೊರೆತ ಬಸ್ ಟಿಕೆಟ್ ಮತ್ತು ಟ್ಯಾಟೋ ಆಧಾರದ ಮೇಲೆ ಪೊಲೀಸರು ಉಮರ್ಗಾ ಜಿಲ್ಲೆಗೆ ಸಂಪರ್ಕಿಸಿದ್ದು, ಮೃತ ದೇಹ ಚಾಂದಿವಾಲೆ ಅವರದ್ದೆಂದು ದೃಢಪಡಿಸಿದ್ದಾರೆ.
ಚಾಂದಿವಾಲೆ ಮೂಲತಃ ಭಾಲ್ಕಿ ತಾಲೂಕಿನ ಲಖನಗಾಂವ್ ನಿವಾಸಿಯಾಗಿದ್ದರು. ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. 2008ರಿಂದ ನಗರದ ಬರೀದ್ ಶಾಹಿ ಉದ್ಯಾನದಲ್ಲಿ ಉಚಿತ ಯೋಗ ಶಿಬಿರ ನಡೆಸುತ್ತಿದ್ದರು. ಯೋಗ ಗುರು ಬಾಬಾ ರಾಮದೇವ ಅವರ ಆಪ್ತರಾಗಿದ್ದರು. ಮರಾಠ ಸಮಾಜ ಮುಖಂಡರೂ ಆಗಿದ್ದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಇದು ಕೊಲೆಯೋ ಅಥವಾ ರಸ್ತೆ ಅಪಘಾತ ಎನ್ನುವುದು ಪೊಲೀಸರ ತನಿಖೆಯಿಂದಲೇ ಗೊತ್ತಾಗಬೇಕಾಗಿದೆ. ಉಮರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.