ಅಪಹರಣ ಪ್ರಕರಣ: ಭವಾನಿ ರೇವಣ್ಣ ಕಾರು ಚಾಲಕ ಅರೆಸ್ಟ್

Prasthutha|

ಬೆಂಗಳೂರು: ಮೈಸೂರು ಜಿಲ್ಲೆ ಕೆಆರ್ ನಗರ ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಅವರ ಕಾರು ಚಾಲಕ ಅಜಿತ್ ನನ್ನೂ ಎಸ್ ಐಟಿ ಬಂಧಿಸಿರುವ ವಿಚಾರ ಬೆಳಕಿಗೆ ಬಂದಿದೆ.

- Advertisement -


ಬುಧವಾರ ರಾತ್ರಿಯೇ ಚಿಕ್ಕಮಗಳೂರಿನಲ್ಲಿ ಅಜಿತ್ ನನ್ನು ಎಸ್ ಐಟಿ ಬಂಧಿಸಿತ್ತು. ಚಾಲಕ ಅಜಿತ್ ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿ ಇದ್ದ. ಈ ಮಾಹಿತಿ ಆಧರಿಸಿ ಚಿಕ್ಕಮಗಳೂರಿನಲ್ಲಿ ಎಸ್ ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಈ ಹಿಂದೆ ಅಜಿತ್ ಮಾವನ ಮನೆಯಲ್ಲಿ ಕೂಡ ಶೋಧ ನಡೆಸಿದ್ದರು. ಸಂತ್ರಸ್ತೆಯ ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿರುವ ಆರೋಪ ಅಜಿತ್ ಮೇಲಿದೆ.



Join Whatsapp