►ಯಾರು 17 ಸಂಸದರು?
ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಯಾವುದೇ ಪಕ್ಷಕ್ಕೆ ಬಹುಮತ ದೊರೆತಿಲ್ಲ. ಈಗ ಎಲ್ಲರ ಕಣ್ಣು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಮೇಲೆ ನೆಟ್ಟಿದೆ. ಒಟ್ಟು 28 ಸ್ಥಾನಗಳಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬಹುಮುಖ್ಯವಾಗಿ ಪರಿಣಮಿಸಿದೆ.
ಈ ಎರಡು ಪಕ್ಷಗಳ ಹೆಜ್ಜೆಗಳ ಮೇಲೆ ಮಾತ್ರವಲ್ಲದೆ, ಎನ್ ಡಿಎ ಅಥವಾ ಇಂಡಿಯಾ ಮೈತ್ರಿಕೂಟದ ಭಾಗವಲ್ಲದ ಸ್ವತಂತ್ರ ಸಂಸದರು ಮತ್ತು ಪಕ್ಷಗಳ ಮೇಲೂ ಗಮನ ಹರಿಸಲಾಗಿದೆ. ಅಂತಹ ಸಂಸದರ ಸಂಖ್ಯೆ 17 ಇವೆ. ಈ ಸಂಸದರು ಕೂಡ ಸರ್ಕಾರದ ಭವಿಷ್ಯವನ್ನೂ ನಿರ್ಧರಿಸಬಹುದು.
ಯಾರು 17 ಸಂಸದರು?
1-ಪಪ್ಪು ಯಾದವ್- ಸ್ವತಂತ್ರ
2- ಓವೈಸಿ- ಎಐಎಂಐಎಂ
3- ಚಂದ್ರಶೇಖರ್ ಆಜಾದ್- ಆಜಾದ್ ಸಮಾಜ ಪಕ್ಷ (ಕಾನ್ಶಿ ರಾಮ್)
4- ಸಬರ್ಜಿತ್ ಸಿಂಗ್ ಖಾಲ್ಸಾ- ಸ್ವತಂತ್ರ
5- ಅಮೃತಪಾಲ್ ಸಿಂಗ್- ಸ್ವತಂತ್ರ
6-ವಿಶಾಲ್ ಪಾಟೀಲ್- ಸ್ವತಂತ್ರ
7- ಇಂಜಿನಿಯರ್ ರಶೀದ್- ಸ್ವತಂತ್ರ
8- ಪಟೇಲ್ ಉಮೇಶಭಾಯ್- ಸ್ವತಂತ್ರ
9- ಮೊಹಮ್ಮದ್ ಹನೀಫಾ- ಸ್ವತಂತ್ರ
10-ರಿಕಿ ಆಂಡ್ರ್ಯೂ- ಪೀಪಲ್ಸ್ ಪಾರ್ಟಿ
11-ರಿಚರ್ಡ್ ವನ್ಲಾಲ್ಹಂಗೈಹಾ ಜೋರಾಮ್ – ಪೀಪಲ್ಸ್ ಮೂವ್ಮೆಂಟ್
12-ಹರ್ಸಿಮ್ರತ್ ಕೌರ್ ಬಾದಲ್- ಶಿರೋಮಣಿ ಅಕಾಲಿದಳ
13-ಪೆದ್ದಿರೆಡ್ಡಿ ವೆಂಕಟ ಮಿಧುನ್ ರೆಡ್ಡಿ- ವೈಎಸ್ ಆರ್ ಸಿಪಿ
14-ಅವಿನಾಶ್ ರೆಡ್ಡಿ ವೈ- ಎಸ್ ಆರ್ ಸಿಪಿ
15-ತನುಜ್ ರಾಣಿ ವೈ- ಎಸ್ ಆರ್ ಸಿಪಿ
16-ಗುರುಮೂರ್ತಿ ಮಡಿಲ- ವೈ ಎಸ್ ಆರ್ ಸಿಪಿ
17-ಜೋಯಂತ ಬಸುಮತರಿ- ಯುಪಿಪಿಎಲ್