ಮಂಗಳೂರು: ಕರ್ನಾಟಕ ಕಾಂಗ್ರೆಸ್ ವಕ್ತಾರೆಯಾಗಿ ಗಮನ ಸೆಳೆದಿದ್ದ ಭವ್ಯ ನರಸಿಂಹಮೂರ್ತಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಕ್ಕೆ ಕೆಲವು ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ, ದೇಶದ್ರೋಹದ ಪಟ್ಟ ಕಟ್ಟಿ ಕಾಮೆಂಟ್ ಮಾಡುತ್ತಿರುವುದಕ್ಕೆ ಎಸ್ಡಿಪಿಐ ಕಿಡಿಗಾರಿದೆ.
ಈ ಕುರಿತು X ನಲ್ಲಿ ದ.ಕ. ಜಿಲ್ಲಾ SDPI ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರ್ ಪೋಸ್ಟ್ ಮಾಡಿದ್ದಾರೆ. ಬಿಜೆಪಿಯ ದ.ಕ. ಕ್ಷೇತ್ರದ ಅಭ್ಯರ್ಥಿ ಸೇನೆಯಲ್ಲಿ ಕೆಲವು ಸಮಯ ಕೆಲಸ ಮಾಡಿ ರಾಜಕೀಯಕ್ಕೆ ಬಂದಾಗ ಮತ್ತು ಮಾಲೆಂಗಾವ್ ಸ್ಫೋಟದ ಆರೋಪಿ ಕರ್ನಲ್ ಪುರೋಹಿತನಂತಹವರು ಬಾಂಬು ಸ್ಫೋಟಿಸಿ ದೇಶದ್ರೋಹದ ಕೆಲಸ ಮಾಡಿದಾಗ ಅಂಧ ಭಕ್ತರು ಕುರುಡರಾಗಿದ್ದರು ಎಂದು ದ.ಕ. ಜಿಲ್ಲಾ SDPI ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರ್ ಹೇಳಿದ್ದಾರೆ.
ಇದೀಗ ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿಯವರು ರಾಜಕೀಯದೊಂದಿಗೆ ಸೇನೆಯಲ್ಲಿ ಕೆಲಸ ಮಾಡಲು ಆಯ್ಕೆಯಾದಾಗ ಎರಡು ರುಪಾಯಿಯ ಕೆಲವು ಅಂಧ ಭಕ್ತರು ಅವರ ದೇಶಪ್ರೇಮದ ಬಗ್ಗೆ ಪಶ್ನೆ ಎತ್ತುತ್ತಿದ್ದಾರೆ. ಇನ್ನು ಕೆಲವರು ನೇರವಾಗಿ ದೇಶದ್ರೋಹದ ಪಟ್ಟವನ್ನು ನೀಡುತ್ತಿದ್ದಾರೆ. ದ.ಕ. ಜಿಲ್ಲಾ ಪೊಲೀಸ್ ಮತ್ತು ರಾಜ್ಯದ ಸಿಎಂ ಆಧಾರ ರಹಿತ ಆರೋಪ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಆಗ್ರಹಿಸುತ್ತೇನೆ ಎಂದ ಅವರು, ಭವ್ಯ ನರಸಿಂಹಮೂರ್ತಿಗೆ ಅಭಿನಂದನೆ ಸಲ್ಲಿಸಿದ್ದಾರೆ.