ಅತಿಯಾದ ನಿರೀಕ್ಷೆ ಇಲ್ಲದಿದ್ದರೂ ‘INDIA’ ಒಕ್ಕೂಟ ಗೆದ್ದು ಬರಲಿ: ರಿಯಾಝ್ ಫರಂಗಿಪೇಟೆ

Prasthutha|

ಉಳ್ಳಾಲ: ಕೇವಲ ಬಿಜೆಪಿ ಸೋಲಲಿ ಎಂಬ ಏಕಮಾತ್ರ ಉದ್ದೇಶದಿಂದ ಲಾಭ ರಹಿತವಾಗಿ, ಇಂಡಿಯಾ ಒಕ್ಕೂಟ ಗೆದ್ದು ಬರಲಿ ಎಂದು ಆಶಿಸುವುದಾಗಿ SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

- Advertisement -

ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಂಗಳೂರು ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಮಾವೇಶ ಅಧ್ಯಕ್ಷರಾದ ಎಸ್ ಎಂ ಬಶೀರ್ ಅದ್ಯಕ್ಷತೆಯಲ್ಲಿ ಪ್ರಾಸ್ಥಾವಿಕ ನುಡಿಗಳೊಂದಿಗೆ ಯುನಿಟಿ ಹಾಲ್ ಕಲ್ಲಾಪು ಇಲ್ಲಿ ನಡೆಯಿತು.

ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಎಲ್ಲಿಯವರೆಗೆ ಫ್ಯಾಸಿಸ್ಟ್ ಸಿದ್ಧಾಂತವನ್ನು ಸಂಪೂರ್ಣ ಕೊನೆಗೊಳಿಸಲು ಈ ದೇಶದ ಜನತೆ ಸಿದ್ಧರಾಗುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

- Advertisement -

ಎಸ್ ಡಿ ಪಿ ಐ ಪಕ್ಷವು ರಾಜಿರಹಿತ ಹೋರಾಟದಿಂದಲೇ ಆರಂಭವಾಗಿದ್ದು, ಇಂದಿಗೂ ಆ ದೃಢತೆಯನ್ನು ಹೊಂದಿದೆ. ಕೇವಲ ಬಿಜೆಪಿ ಸೋಲಲಿ ಎಂಬ ಏಕಮಾತ್ರ ಉದ್ದೇಶದಿಂದ ಲಾಭ ರಹಿತವಾಗಿ, ಇಂಡಿಯಾ ಒಕ್ಕೂಟ ಗೆದ್ದು ಬರಲಿ ಎಂದು ಆಶಿಸುವುದಾಗಿ ಹೇಳಿದರು.

ಇನ್ನೇನು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮುಂತಾದ ಚುನಾವಣೆಗಳು ಹತ್ತಿರವಿದ್ದು, ಕಾರ್ಯಕರ್ತರು ಸಂಪೂರ್ಣವಾಗಿ ಸನ್ನದ್ಧರಾಗಬೇಕೆಂದು ಕಾರ್ಯಕರ್ತರಿಗೆ ಕರೆನೀಡಿದರು.

ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಸಮಾರೋಪ ಭಾಷಣಗೈದರು

ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ನವಾಝ್ ಉಳ್ಳಾಲ, ಮಂಗಳೂರು ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಫಾರೂಕ್ ಝಲ್ ಝಲ್, ಕೋಶಾಧಿಕಾರಿ ರವೂಫ್ ಉಳ್ಳಾಲ, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಬೈದ್ ಅಮ್ಮೆಂಬಳ ಸ್ವಾಗತಿಸಿ, ರಹಿಮಾನ್ ಬೋಳಿಯಾರ್ ಕಾರ್ಯಕ್ರಮ ನಿರೂಪಿದರು.



Join Whatsapp