ಮಿಜೋರಾಂ: ಮಳೆ, ಭೂ ಕುಸಿತದಿಂದ ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆ

Prasthutha|

ಐಜ್ವಾಲ್: ಮಿಜೋರಾಂನ ಐಜ್ವಾಲ್, ಕೊಲಾಸಿಬ್ ಮತ್ತಿತರ ಜಿಲ್ಲೆಯಲ್ಲಿ ನಿರಂತರ ಮಳೆ, ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

- Advertisement -

ಕೊಲಾಸಿಬ್ ಜಿಲ್ಲೆಯ ಟ್ಲಾಂಗ್ ನದಿಯಲ್ಲಿ 34 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಇದರೊಂದಿಗೆ ಮೃತರ ಸಂಖ್ಯೆ 30ಕ್ಕೆ ಏರಿದೆ. ಮಂಗಳವಾರ ಐಜ್ವಾಲ್ ಜಿಲ್ಲೆಯ ಐಬಾವ್ಕ್ ಗ್ರಾಮದಲ್ಲಿ ಭೂಕುಸಿತದಿಂದ ಮಹಿಳೆ ಮತ್ತು ಆಕೆಯ ಪತಿ ನಾಪತ್ತೆಯಾಗಿದ್ದರು.

ಮಂಗಳವಾರ ಐಜ್ವಾಲ್ ಜಿಲ್ಲೆಯ ಅನೇಕ ಕಡೆ ಸಂಭವಿಸಿದ ಭೂಕುಸಿತದಲ್ಲಿ 21 ಮಂದಿ ಸ್ಥಳೀಯರು, 8 ಮಂದಿ ಹೊರ ರಾಜ್ಯದವರು ಮೃತಪಟ್ಟಿದ್ದರು. ಮುಖ್ಯಮಂತ್ರಿ ಲಾಲ್ದುಹೋಮ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ರೆಮಲ್ ಚಂಡಮಾರುತದಿಂದ ಉಂಟಾದ ಮಳೆಯಿಂದ ಉಂಟಾಗುವ ಅನಾಹುತಗಳನ್ನು ನಿಭಾಯಿಸಲು ಸರ್ಕಾರ 15 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ಅವರು ಹೇಳಿದ್ದಾರೆ.



Join Whatsapp