ಮತ್ತೆ ಅಧ್ಯಕ್ಷನಾದರೆ ಪ್ಯಾಲೆಸ್ತೀನ್ ಪರ ಪ್ರತಿಭಟಿಸುವವರ ಗಡೀಪಾರು ಮಾಡುತ್ತೇನೆ: ಟ್ರಂಪ್

Prasthutha|

ವಾಷಿಂಗ್ಟನ್: ನಾನು ಎರಡನೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆಗೊಂಡರೆ ಪ್ಯಾಲೆಸ್ತೀನ್ ಪರ ಪ್ರತಿಭಟನಕಾರರನ್ನು ಗಡೀಪಾರು ಮಾಡುತ್ತೇನೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

- Advertisement -

ನ್ಯೂಯಾರ್ಕ್‍ನಲ್ಲಿ ನಡೆದಿದ್ದ ಪಕ್ಷದ ಪ್ರಮುಖ ದೇಣಿಗೆದಾರರ ಸಭೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿರುವುದಾಗಿ `ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ನಾನು ಅಧ್ಯಕ್ಷನಾಗಿ ಆಯ್ಕೆಗೊಂಡರೆ ಮಾಡುವ ಒಂದು ಕೆಲಸವೆಂದರೆ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳನ್ನು ದೇಶದಿಂದ ಹೊರಗೆಸೆಯುತ್ತೇನೆ. ಇಲ್ಲಿ ಹಲವು ವಿದೇಶೀ ವಿದ್ಯಾರ್ಥಿಗಳಿರುವುದು ನಿಮಗೂ ಗೊತ್ತು. ನಾನು ಈ ಕ್ರಮ ಕೈಗೊಂಡಿರುವುದನ್ನು ಕೇಳಿದೊಡನೆ ಅವರು ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳುತ್ತಾರೆ. ಪ್ರತಿಭಟನೆಗಳು ತೀವ್ರವಾದಿಗಳ ಪ್ರದರ್ಶನವಾಗಿದ್ದು, ಅದನ್ನು ಬಗ್ಗುಬಡಿಯುತ್ತೇನೆ. ಕೊಲಂಬಿಯಾ ವಿವಿಯಲ್ಲಿ ನಡೆದ ಪ್ರತಿಭಟನೆಯನ್ನು ಚದುರಿಸಲು ನ್ಯೂಯಾರ್ಕ್ ಪೊಲೀಸರು ಕೈಗೊಂಡ ಕ್ರಮಗಳನ್ನು ಶ್ಲಾಘಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

- Advertisement -

ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ರಿಪಬ್ಲಿಕನ್ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.



Join Whatsapp