ಪ್ಯಾಲೆಸ್ತೀನ್‌ಗೆ ಯೂರೋಪಿಯನ್ ಯೂನಿಯನ್ ಸದಸ್ಯತನ: ನಾರ್ವೆ ದೇಶಗಳು ಒಪ್ಪಿಗೆ

Prasthutha|

ಬಾರ್ಸೆಲೊನಾ: ಯೂರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರವಾಗಿ ಪ್ಯಾಲೆಸ್ತೀನ್‌ಗೆ ಮಾನ್ಯತೆ ನೀಡಲು ಸ್ಪೇನ್‌ ಮತ್ತು ನಾರ್ವೆ ದೇಶಗಳು ಒಪ್ಪಿಗೆ ನೀಡಿದೆ.

- Advertisement -

ಸ್ಪೇನ್‌ನ ಪ್ರಧಾನ ಮಂತ್ರಿ ಪೆದ್ರೊ ಸ್ಯಾಂಚೆಜ್, ಮಂಗಳವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿಲುವು ಕೈಗೊಳ್ಳಲಾಗಿದೆ. ಇಸ್ರೇಲಿಯನ್ನರು ಮತ್ತು ಪ್ಯಾಲೆಸ್ತೀನಿಯರ ನಡುವೆ ಶಾಂತಿ ಸ್ಥಾಪನೆಗೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

ಕಳೆದ 30 ವರ್ಷಗಳಿಂದ ಪ್ಯಾಲೆಸ್ತೀನ್ ರಾಷ್ಟ್ರವನ್ನು ನಾರ್ವೆ ಬೆಂಬಲಿಸುತ್ತಿದ್ದು, ಇಯು ಸದಸ್ಯತ್ವ ಪ್ರಸ್ತಾಪವನ್ನು ಬೆಂಬಲಿಸಲಿದೆ ಎಂದು ನಾರ್ವೆಯ ವಿದೇಶಾಂಗ ಸಚಿವ ಎಸ್ಪೆನ್ ಬಾರ್ತ್‌ ಐಡೆ ತಿಳಿಸಿದ್ದಾರೆ.

- Advertisement -

ಈ ರಾಜತಾಂತ್ರಿಕ ನಡೆಯನ್ನು ಇಸ್ರೇಲ್‌ ಖಂಡಿಸಿದೆ. ಗಾಝಾದಲ್ಲಿ ನಡೆಯುತ್ತಿರುವ ಯುದ್ಧದ ಮೇಲೆ ಈ ಬೆಳವಣಿಗೆ ಯಾವುದೇ ಪರಿಣಾಮ ಹೇಳಿದೆ.

ಸ್ಪೇನ್‌ ಸರ್ಕಾರ ಈ ಮೂಲಕ ಸಂಕೀರ್ಣ ನಿಲುವು ಪ್ರದರ್ಶಿಸಿದ್ದು, ಜ್ಯೂಯಿಶ್‌ಗಳ ವಿರುದ್ಧದ ನರಮೇಧ ಹಾಗೂ ಯುದ್ಧ ಅಪರಾಧಗಳಿಗೆ ಬೆಂಬಲ ನೀಡುತ್ತಿದೆ ಎಂದು ಇಸ್ರೇಲ್‌ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್‌ ಪ್ರತಿಕ್ರಿಯಿಸಿದ್ದಾರೆ.



Join Whatsapp