ಭಾನುವಾರದ ರಜಾದಿನ ಕ್ರಿಶ್ಚಿಯನ್ ಸಮುದಾಯದೊಂದಿಗೆ ಸಂಬಂಧ ಹೊಂದಿದೆ: ಮೋದಿ

Prasthutha|

ಜಾರ್ಖಂಡ್: ಭಾರತದಲ್ಲಿ ಭಾನುವಾರದ ರಜಾದಿನವು ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಬೇರುಗಳನ್ನು ಹೊಂದಿದೆ ಮತ್ತು ಕ್ರಿಶ್ಚಿಯನ್ ಸಮುದಾಯದೊಂದಿಗೆ ಸಂಬಂಧ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

- Advertisement -

ದುಮ್ಕಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ದೇಶದಲ್ಲಿ ಭಾನುವಾರ ರಜೆ ಇದೆ. ಬ್ರಿಟಿಷರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ಕ್ರಿಶ್ಚಿಯನ್ ಸಮುದಾಯವು ರಜಾದಿನವನ್ನು (ಭಾನುವಾರ) ಆಚರಿಸುತ್ತಿತ್ತು. ಈ ಸಂಪ್ರದಾಯ ಆ ಸಮಯದಿಂದ ಪ್ರಾರಂಭವಾಯಿತು. ಭಾನುವಾರ ಹಿಂದೂಗಳೊಂದಿಗೆ ಸಂಬಂಧ ಹೊಂದಿಲ್ಲ, ಇದು ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದೆ. ಇದು ಕಳೆದ 200-300 ವರ್ಷಗಳಿಂದ ನಡೆಯುತ್ತಿದೆ ಎಂದಿದ್ದಾರೆ.

ಹಿಂದೂ ಧರ್ಮಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ‘ಲವ್ ಜಿಹಾದ್’ ಆರಂಭಗೊಂಡದ್ದೇ ಜಾರ್ಖಂಡ್​ನಿಂದ ಎಂದು ಪ್ರಧಾನಿ ಇದೇ ಸಂದರ್ಭ ಆರೋಪ ಮಾಡಿದ್ದಾರೆ.

- Advertisement -

ಜಾರ್ಖಂಡ್ 43 ಸರ್ಕಾರಿ ಶಾಲೆಗಳು ಏಕಪಕ್ಷೀಯವಾಗಿ ತಮ್ಮ ಸಾಪ್ತಾಹಿಕ ವಿರಾಮವನ್ನು ಶುಕ್ರವಾರಕ್ಕೆ ಬದಲಾಯಿಸಿದ ಎರಡು ವರ್ಷಗಳ ಬಳಿಕ 2022ರಲ್ಲಿ ಜಾರ್ಖಂಡ್ ಸರ್ಕಾರ ಶಾಲೆಗಳ ನಿರ್ವಹಣಾ ಸಮಿತಿಗಳನ್ನು ವಿಸರ್ಜಿಸಿ ಭಾನುವಾರವನ್ನು ಅಧಿಕೃತ ರಜಾದಿನವಾಗಿ ಪುನಃಸ್ಥಾಪಿಸಿದೆ. ಈ ಕುರಿತು ಪ್ರಧಾನಿ ಮಾತನಾಡಿದ್ದಾರೆ.



Join Whatsapp