ಕೊಪ್ಪಳ: ಒಂದೇ ಕುಟುಂಬದ 3 ಜನ ಅನುಮಾನಾಸ್ಪದವಾಗಿ ಸಾವು

Prasthutha|

ಕೊಪ್ಪಳ: ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರದಲ್ಲಿ ನಡೆದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

- Advertisement -

ರಾಜೇಶ್ವರಿ (50), ವಸಂತಾ (28), ಸಾಯಿಧರ್ಮತೇಜ್ (5) ಮೃತರು. ವಸಂತಾ ಮನೆ ಒಡತಿ. ವಸಂತಾ ಅವರ ತಾಯಿ ರಾಜೇಶ್ವರಿ, ಮಗ ಸಾಯಿಧರ್ಮತೇಜ್.ಆಂಧ್ರ ಪ್ರದೇಶದ ನಂದ್ಯಾಲ ಗ್ರಾಮದ ವ್ಯಕ್ತಿ ಜೊತೆ ವಸಂತಾರ ಮದುವೆ ಆಗಿತ್ತು. ಆದರೆ ವಸಂತಾ ಕಳೆದ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿ, ಬಳಿಕ ಹೊಸಲಿಂಗಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ತಾಯಿ ಮತ್ತು ಮಗನ ಜೊತೆ ಇದ್ದರು ಎಂದು ತಿಳಿದು ಬಂದಿದೆ.



Join Whatsapp