ಕೆಲಸ ಕೇಳಿ ಬಳಿ ಬಂದ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿರುವ ಪಂಜಾಬ್ ಆಪ್ ಸಚಿವ: ವೀಡಿಯೊ ವೈರಲ್

Prasthutha|

ನವದೆಹಲಿ: ಕೆಲಸ ಕೇಳಿ ಬಳಿ ಬಂದ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿರುವ ಪಂಜಾಬ್ ಆಪ್ ಸಚಿವನ ವಿಡಿಯೋವನ್ನು ಬಿಜೆಪಿ ನಾಯಕ ತಜಿಂದರ್ ಬಗ್ಗಾ ಹಂಚಿಕೊಂಡಿದ್ದಾರೆ.

- Advertisement -

ವಿಡಿಯೋ ಭಾರಿ ವೈರಲ್ ಆಗಿದ್ದು, ವಿಡಿಯೋ ಹಂಚಿಕೊಂಡ ಬಿಜೆಪಿ, ತಕ್ಷಣವೇ ಸಚಿವರನ್ನು ವಜಾಗೊಳಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

21 ವರ್ಷದ ಯುವತಿ ಕೆಲಸ ಕೇಳಿಕೊಂಡು ಪಂಜಾಬ್ ಆಪ್ ಸಚಿವ ಬಾಲ್ಕಾರ್ ಸಿಂಗ್ ಬಳಿ ಬಂದಿದ್ದಾರೆ. ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ ಪಂಜಾಬ್ ಆಪ್ ಸಚಿವ ಕಚೇರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಯುವತಿಗೆ ವಿಡಿಯೋ ಕಾಲ್ ಮಾಡಿದ ಸಚಿವ ಬಾಲ್ಕರ್ ಸಿಂಗ್ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ವಿಡಿಯೋ ಕಾಲ್‌ನಲ್ಲಿ ಯುವತಿ ಎದುರೇ ಪ್ಯಾಂಟ್ ಬಿಚ್ಚಿದ ಸಚಿವ, ತೀರಾ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಯುವತಿಗೂ ಬಟ್ಟೆ ಬಿಚ್ಚಿ ನಿಲ್ಲುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

- Advertisement -

ವಿಡಿಯೋ ಆಪ್ ಪಕ್ಷಕ್ಕೆ ತೀವ್ರ ಮುಜುಗರ ತಂದಿದೆ



Join Whatsapp