ಅಂಡಮಾನ್: ರೆಮಲ್ ಚಂಡಮಾರುತದಿಂದಾಗಿ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಅಂಡಮಾನ್ ಪ್ರವಾಸಕ್ಕೆ ತೆರಳಿದ್ದ ರಾಜ್ಯದ 180 ಜನ ತೊಂದರೆಗೆ ಸಿಲುಕಿದ್ದಾರೆ.ಮೇ 22 ರಂದು ತೆರಳಿದ್ದ ಪ್ರವಾಸಿಗರು ಇಂದು ವಾಪಸ್ ಆಗಬೇಕಿತ್ತು. ಆದರೆ ಬೆಳಗ್ಗೆ 11 ಗಂಟೆಯಿಂದ ನೀರು, ಆಹಾರವಿಲ್ಲದೆ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿದೆ.
ಅಂಡಮಾನ್ ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಪರದಾಟ ನಡೆಸಿದ್ದಾರೆ. ಕನ್ನಡಿಗ ಪ್ರವಾಸಿಗರು ಬರಬೇಕಿದ್ದ ವಿಸ್ತಾರ ವಿಮಾನ ಸೇವೆಯಲ್ಲಿ ಭಾರಿ ವ್ಯತ್ಯಯವಾಗಿದೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿಗರು ಸಹಾಯಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.