ಪಡಿತರ ಮತ್ತು ಇತರ ವ್ಯವಸ್ಥೆಯ ಕುರಿತ ಚರ್ಚೆಯ ಸಂದರ್ಭ ಒಡಿಶಾದ ಬಿಜೆಪಿ ಶಾಸಕ ವಿಧಾನಸಭೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದಿಯೋಘಡ ಶಾಸಕರಾದ ಸುಭಾಷ್ ಚಂದ್ರ ಪಾಣಿಗ್ರಹಿ ತಮ್ಮ ಕ್ಷೇತ್ರದ ರೈತರ ಉತ್ಪನ್ನಗಳನ್ನು ದಾಸ್ತಾನು ಮಾಡಲು ರಾಜ್ಯ ಸರ್ಕಾರ ಸಿದ್ಧರಿಲ್ಲದಿರುವುದನ್ನು ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬಜೆಟ್ ಅಧಿವೇಶನದ ಎರಡನೇ ಹಂತವು ಸದನದಲ್ಲಿ ನಡೆಯುತ್ತಿದ್ದಂತೆಯೇ ಈ ಘಟನೆ ನಡೆದಿದೆ. ಸ್ಯಾನಿಟೈಝರ್ ಅನ್ನು ತನ್ನ ಬಾಯಿಗೆ ಸುರಿಯಲು ಪ್ರಯತ್ನಿಸಿದ ಶಾಸಕರನ್ನು ಸಂಸದೀಯ ವ್ಯವಹಾರಗಳ ಸಚಿವ ಬಿಕ್ರಮ್ ಅರೂಕಾ ಮತ್ತು ಬಿಜೆಡಿ ಶಾಸಕ ಪ್ರಮೀಲಾ ಮಲ್ಲಿಕ್ ತಡೆದಿದ್ದಾರೆ. ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳನ್ನು ಎತ್ತುವುದು ನಿಜ ಆದರೆ ಇಂತಹ ಕ್ರಮಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಡಿ ಶಾಸಕ ಅನಂತ ದಾಸ್ ಹೇಳಿದ್ದಾರೆ. ದಾಸ್ತಾನು ಪ್ರಕ್ರಿಯೆಯನ್ನು ಸುಗಮಗೊಳಿಸಬೇಕೆಂದು ಒತ್ತಾಯಿಸಿ ಪಾಣಿಗ್ರಹಿ ಈ ಹಿಂದೆ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.