ಮುಂಬೈ: ವಿಮಾನ ಡಿಕ್ಕಿ, 36 ಫ್ಲೆಮಿಂಗೋ ಪಕ್ಷಿಗಳ ಸಾವು

Prasthutha|

ಮುಂಬೈನ ಘಾಟ್ ಕೋಪರ್ ನ ಪಂತ್ ನಗರದಲ್ಲಿ ವಿಮಾನವೊಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 36 ಫ್ಲೆಮಿಂಗೋಗಳು ಸಾವನ್ನಪ್ಪಿವೆ.

- Advertisement -

ಘಾಟ್ಕೋಪರ್ ಪೂರ್ವ ಪ್ರದೇಶದ ರಸ್ತೆಯಲ್ಲಿ ಫ್ಲೆಮಿಂಗೊ ಪಕ್ಷಿಗಳ ಮೃತ ದೇಹಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿವೆ. ಈ ಫ್ಲೆಮಿಂಗೊಗಳ (ಫ್ಲೆಮಿಂಗೊ ಪಕ್ಷಿಗಳು) ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಫ್ಲೆಮಿಂಗೋಗಳ ಹಿಂಡು ಆಕಾಶದಲ್ಲಿ ಹಾರಾಡುತ್ತಿದ್ದಾಗ ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಸಾಧ್ಯತೆಯನ್ನು ಪಕ್ಷಿ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ.

ನವಿ ಮುಂಬೈ ಒಂದು ಬದಿಯಲ್ಲಿ ವಿಶಾಲವಾದ ಕೊಲ್ಲಿಯನ್ನು ಹೊಂದಿರುವುದರಿಂದ, ಪ್ರತಿ ವರ್ಷ ಲಕ್ಷಾಂತರ ಫ್ಲೆಮಿಂಗೋಗಳು ಈ ಸ್ಥಳಕ್ಕೆ ಭೇಟಿ ನೀಡುತ್ತವೆ. ಘಟನೆಯು ರಾತ್ರಿ 8.40 ರಿಂದ 8.50 ರ ನಡುವೆ ನಡೆದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.



Join Whatsapp