ಭಾರೀ ಮಳೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

Prasthutha|

ಚೆನ್ನೈ: ತಮಿಳುನಾಡು ರಾಜಧಾನಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗಿದ್ದು, ತಾಪಮಾನವು ಒಂದೆರಡು ಡಿಗ್ರಿಗಳಷ್ಟು ಕಡಿಮೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಲಗಿರಿ ಪ್ರದೇಶದಲ್ಲಿ ಎಲ್ಲೋ ಅಲರ್ಟ್ ಘೋಷಿಸಿದ್ದು, ಜಿಲ್ಲಾಡಳಿತ ಪ್ರವಾಸಿಗರು ಬೇಸಿಗೆ ರಜೆಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡದಂತೆ ಕೇಳಿಕೊಂಡಿದೆ.

- Advertisement -

ಮಳೆ ಬಂದು ತಂಪಾಗಿರುವ ವೇಳೆಯಲ್ಲಿ ಪ್ರವಾಸಿಗರು ಮತ್ತೊಮ್ಮೆ ಊಟಿಗೆ ಭಾರಿ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸಿರುವ ಸಮಯದಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ಪ್ರವಾಸಿಗರು ಮೇ 18 ರಿಂದ ಮೇ 20 ರವರೆಗೆ ಯಾವ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡುವುದನ್ನು ತಪ್ಪಿಸುವಂತೆ ಜಿಲ್ಲಾಧಿಕಾರಿ ಎಂ.ಅರುಣಾ ಮನವಿ ಮಾಡಿದ್ದಾರೆ.

- Advertisement -

ಕನ್ಯಾಕುಮಾರಿ ಜಿಲ್ಲೆಯ ಮೈಲಾಡಿಯಲ್ಲಿ 7 ಸೆಂ.ಮೀ ಮಳೆಯಾಗಿದ್ದರೆ, ತಿರುಚೆಂದೂರು, ವಾಲ್ಪಾರೈ ಮತ್ತು ನನ್ನಿಲಂನಲ್ಲಿ ತಲಾ 6 ಸೆಂ.ಮೀ, ಕಡಲೂರು ಮತ್ತು ಕೊಯಮತ್ತೂರಿನಲ್ಲಿ ತಲಾ 5 ಸೆಂ.ಮೀ ಮತ್ತು ಚೆಂಗಲ್ಪಟ್ಟು ನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಕುರ್ಟಾಲಂನಲ್ಲಿ 16 ವರ್ಷದ ಬಾಲಕ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಏಕಾಏಕಿ ಭಾರೀ ನೀರು ಬಂದುದರಿಂದ ಕೊಚ್ಚಿಹೋದ ಘಟನೆ ನಡೆದಿದೆ.



Join Whatsapp