ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೆಸರು ಕೆಡಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನನಗೆ ಕೋಟಿ 100 ಕೋಟಿ ಆಫರ್ ನೀಡಿದ್ದರು ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದ ಬೆನ್ನಲ್ಲೇ ಜೆಡಿಎಸ್ Xನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
1) ಡಿಸಿಎಂ ಡಿ.ಕೆ.ಶಿವಕುಮಾರ್
2) ಕೃಷಿ ಸಚಿವ ಚೆಲುವರಾಯಸ್ವಾಮಿ
3) ಕಂದಾಯ ಸಚಿವ ಕೃಷ್ಣಭೈರೇಗೌಡ
4) IT BT ಸಚಿವ ಪ್ರಿಯಾಂಕ್ ಖರ್ಗೆ
5) ಇನ್ನೂ ಒಬ್ಬ ಸಚಿವ + ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ
ಇವರೆಲ್ಲರೂ ಹೂಡಿರುವ ಸಂಚು ಏನ್ ಗೊತ್ತಾ? ಪ್ರಧಾನಿಗಳಾದ ಮಾನ್ಯ ಶ್ರೀ ನರೇಂದ್ರಮೋದಿ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ HD ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರುವುದು. ಈ ಸಂಚು ಸಾಕಾರಗೊಳಿಸಲು CD ಶಿವಕುಮಾರ್ ಸಾಹೇಬರು ವಕೀಲರಾದ ಶ್ರೀ ದೇವರಾಜೇಗೌಡರಿಗೆ ಆಫರ್ ಮಾಡಿದ ಮೊತ್ತ ಬರೋಬ್ಬರಿ ₹100 ಕೋಟಿ! ಎಂದು ದೇವರಾಜೇಗೌಡ ಹೇಳಿಕೆಯನ್ನ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.