ಮಂಗಳೂರು | ಪೊಲೀಸ್ ವಾಹನದ ವೀಡಿಯೋ ವೈರಲ್: ಸ್ಪಷ್ಟನೆ ನೀಡಿದ ಪೊಲೀಸ್‌ ಕಮಿಷನ‌ರ್

Prasthutha|

- Advertisement -

ಮಂಗಳೂರು: ಪೊಲೀಸ್ ವಾಹನವೊಂದರ ವಿಮೆ ಮುಕ್ತಾಯವಾಗಿದೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ.

ನಗರದ ಕುಂಟಿಕಾನ ಬಳಿ ಹೆದ್ದಾರಿ ಗಸ್ತು ವಾಹನ ಕರ್ತವ್ಯದಲ್ಲಿತ್ತು. ಈ ವೇಳೆ ವ್ಯಕ್ತಿಯೋರ್ವನಿಗೆ ಟ್ರಾಫಿಕ್ ಪೊಲೀಸ್‌ ವಾಯುಮಾಲಿನ್ಯ ತಪಾಸಣಾ ಪತ್ರ ತೋರಿಸಿಲ್ಲ ಎಂದು ದಂಡ ವಿಧಿಸಿದ್ದರು. ಇದರಿಂದ ಕುಪಿತನಾದ ವ್ಯಕ್ತಿ ಹೆದ್ದಾರಿ ಗಸ್ತು ವಾಹನದ ವೀಡಿಯೋ ಚಿತ್ರೀಕರಣ ಮಾಡಿ ಅದರ ವಿಮಾ ಅವಧಿಯು ಮುಕ್ತಾಯವಾಗಿದೆ ಎಂದು ವೀಡಿಯೊ ವೈರಲ್‌ ಮಾಡಿದ್ದಾನೆ.

- Advertisement -

ವೀಡಿಯೋ ವೈರಲ್ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್, ಇದು ತಪ್ಪು ಮಾಹಿತಿ. ಪೊಲೀಸ್‌ ಇಲಾಖೆಯ ಎಲ್ಲಾ ವಾಹನಗಳು ಕಡ್ಡಾಯವಾಗಿ ಕರ್ನಾಟಕ ಗವರ್ನಮೆಂಟ್ ಇನ್ಯುರೆನ್ಸ್ ಡಿಪಾರ್ಟ್‌ಮೆಂಟ್ (ಕೆ.ಜಿ.ಐ.ಡಿ) ವಿಮೆ ಹೊಂದಿರುತ್ತದೆ. ಈ ವಿಮೆಯನ್ನು ಕಾಲಕಾಲಕ್ಕೆ ನವೀಕರಣವಾಗುತ್ತದೆ. ವಿಮೆ ನವೀಕರಣಗೊಳ್ಳದ ಯಾವುದೇ ಇಲಾಖಾ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ತೋರಿಸಲಾಗಿರುವ ಹೆದ್ದಾರಿ ಗಸ್ತು ವಾಹನದ ವಿಮಾ ಅವಧಿ 2025ರ ಅಕ್ಟೋಬರ್ 13ರವರೆಗೆ ಮತ್ತು ವಾಹನದ ಮಾಲಿನ್ಯ ತಪಾಸಣಾ ಅವಧಿಯು 2025ರ ಜನವರಿ 8ರವರೆಗೆ ಚಾಲ್ತಿಯಲ್ಲಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.



Join Whatsapp