ಬಾರಾಬಂಕಿ: ವಿಪಕ್ಷಗಳ ಮೈತ್ರಿಕೂಟ ಭಾಗವಾಗಿರುವ ಕಾಂಗ್ರೆಸ್-ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಬುಲ್ಡೋಜರ್ ಮೂಲಕ ರಾಮಮಂದಿರವನ್ನು ಕೆಡವುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಉತ್ತರಪ್ರದೇಶದ ಬಾರಬಂಕಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಎಲ್ಲಿ ಬುಲ್ಡೋಜರ್ ಓಡಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಳಿ ಅವರು ಟ್ಯೂಷನ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರ ಹ್ಯಾಟ್ರಿಕ್ ಸಾಧಿಸಲಿದೆ ಎಂದು ಪ್ರತಿಪಾದಿಸಿದ ಮೋದಿ, ಹೊಸ ಸರ್ಕಾರದಲ್ಲಿ ಬಡವರು, ಯುವಕರು, ಮಹಿಳೆಯರು ಮತ್ತು ರೈತರಿಗಾಗಿ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ಅದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಸಮಾಜವಾದಿ-ಕಾಂಗ್ರೆಸ್ಗೆ ಮತಬ್ಯಾಂಕ್ಗಿಂತ ದೊಡ್ಡದು ಯಾವುದೂ ಇಲ್ಲ. ನಾನು ಅವರ ಮತಬ್ಯಾಂಕ್ ರಾಜಕೀಯದ ಬಗ್ಗೆ ಬಯಲು ಮಾಡಿದರೆ ಅವರಿಗೆ ನರ್ವಸ್ ಆಗ್ತಾರೆ, ಅವರಿಗೆ ನಿದ್ದೆ ಬರಲ್ಲ. ಆಗ ನನ್ನ ವಿರುದ್ಧ ಏನನ್ನಾದರೂ ಹೇಳಲು ಪ್ರಾರಂಭಿಸುತ್ತಾರೆ, ನಿಂದನೆಗಳು ಶುರುವಾಗುತ್ತೆ ಎಂದು ಹೇಳಿದರು.