23 ವರ್ಷಗಳ ಬಳಿಕ ಮತ್ತೆ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆ

Prasthutha|

ಸವದೆಹಲಿ: ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರಾಯ್ ಅವರನ್ನು ಸೋಲಿಸುವ ಮೂಲಕ ವಿಜಯ ಸಾಧಿಸಿದ್ದಾರೆ.

- Advertisement -

ಪ್ರದೀಪ್ ರಾಯ್ 689 ಮತ ಗಳಿಸಿದರೆ, ಕಪಿಲ್ ಸಿಬಲ್ 1066 ಮತ ಗಳಿಸಿದ್ದಾರೆ. ಹಾಲಿ ಅಧ್ಯಕ್ಷ, ಹಿರಿಯ ವಕೀಲ ಡಾ. ಆದೀಶ್ ಸಿ ಅಗರವಾಲಾ ಅವರು 296 ಮತಗಳನ್ನಷ್ಟೇ ಪಡೆದಿದ್ದಾರೆ.

ಪ್ರಿಯಾ ಹಿಂಗೋರಾಣಿ, ತ್ರಿಪುರಾರಿ ರೇ ಮತ್ತು ನೀರಜ್ ಶ್ರೀವಾಸ್ತವ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

- Advertisement -

ನಾಲ್ಕನೇ ಬಾರಿಗೆ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಪಿಲ್ ಸಿಬಲ್ ಈ ಹಿಂದೆ 1995-96ರಲ್ಲಿ, 1997-98ರಲ್ಲಿ ಮತ್ತು 2001ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2001ರ ಬಳಿಕ 23 ವರ್ಷಗಳ ಬಳಿಕ ಮತ್ತೆ ಕಪಿಲ್ ಸಿಬಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.



Join Whatsapp