16 ಜನರ ಸಾವಿಗೆ ಕಾರಣವಾದ ಜಾಹೀರಾತು ಫಲಕ ನಿರ್ಮಿಸಿದ್ದ ಕಂಪೆನಿ ನಿರ್ದೇಶಕ ಅರೆಸ್ಟ್

Prasthutha|

ಮುಂಬೈ,: ಬೃಹತ್ ಜಾಹೀರಾತು ಹೋರ್ಡಿಂಗ್ ಬಿದ್ದು 16 ಜನರ ಸಾವಿನ‌ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು, ಹೋರ್ಡಿಂಗ್ ನಿರ್ಮಿಸಿದ್ದ ಜಾಹೀರಾತು ಸಂಸ್ಥೆ ಇಗೋ ಮೀಡಿಯಾ ಪ್ರೈವೇಟ್ ಕಂಪನಿಯ ನಿರ್ದೇಶಕ ಭವೇಶ್ ಭಿಂಡೆಯನ್ನು ಬಂಧಿಸಿದ್ದಾರೆ. ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ತಂಡ ಬಂಧಿಸಿದೆ.

- Advertisement -

ಈ ಜಾಹೀರಾತು ಫಲಕವನ್ನು ಈ ಕಂಪನಿಯು10 ವರ್ಷಗಳ ಗುತ್ತಿಗೆಗೆ ನಿರ್ಮಿಸಿ ಕೊಟ್ಟಿತ್ತು. ಅಲ್ಲದೇ ಇಷ್ಟೊಂದು ದೊಡ್ಡ ಜಾಹೀರಾತು ಇದೇ ಮೊದಲಿಗೆ ಹಾಕಲಾಗಿದೆ ಎಂದು ಕಂಪನಿಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಅರ್ಜಿ ಸಲ್ಲಿಸಿತ್ತು. ಇದನ್ನು ಭಾರತದ ಅತಿದೊಡ್ಡ ವಾಣಿಜ್ಯ ನೇಮ್‌ಬೋರ್ಡ್ ಎಂದು ಸಹ ಕಂಪನಿ ಹೇಳಿಕೊಂಡಿತ್ತು.

ಸೋಮವಾರ ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಪೊಲೀಸರು ಭಿಂಡೆ ವಿರುದ್ಧ ಸೆಕ್ಷನ್ 304, 337, 338 ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ಇದೇ ವೇಳೆ ಮುಂಬೈನಿಂದ ಭಿಂಡೆ ಪರಾರಿಯಾಗಿ ಉದಯಪುರ ಸೇರಿದ್ದ. ಆತನ ಶೋಧಕ್ಕೆ ಮುಂಬೈ ಮತ್ತು ಗುಜರಾತ್‌ನಿಂದ 10 ಕ್ಕೂ ಹೆಚ್ಚು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಇಂದು ಕೊನೆಗೆ ಭಿಂಡೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



Join Whatsapp