ಬಿಜೆಪಿ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು!

Prasthutha|

ನವದೆಹಲಿ: ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ತಿಳಿಸಿವೆ.

- Advertisement -

ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ ಕಳೆದ 10 ವರ್ಷದ ಅವಧಿಯಲ್ಲಿ ಬಿಜೆಪಿಗೆ ವಲಸೆ ಬಂದವರಾಗಿದ್ದಾರೆ. ಅವರಲ್ಲಿ 90 ಮಂದಿ ಕಳೆದ ಐದು ವರ್ಷ ಅವಧಿಯಲ್ಲಿ ಬಿಜೆಪಿಗೆ ಬಂದವರಾಗಿದ್ದಾರೆ

ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಆರು ಮಂದಿ ಬಿಜೆಪಿ ಅಭ್ಯರ್ಥಿಗಳು ವಲಸಿಗರಾಗಿದ್ದು, ಕಾಂಗ್ರೆಸ್‌, ವೈಎಸ್‌ಆರ್‌ಪಿ ಹಾಗೂ ಬಿಜೆಪಿಯ ಈಗಿನ ಮಿತ್ರ ಪಕ್ಷ ಟಿಡಿಪಿಯಿಂದ ವಲಸೆ ಬಂದವರು.

- Advertisement -

ತೆಲಂಗಾಣದಲ್ಲಿ ಬಿಜೆಪಿಯ 17 ಅಭ್ಯರ್ಥಿಗಳಲ್ಲಿ ಸುಮಾರು ಮೂರನೇ ಎರಡರಷ್ಟು ಅಭ್ಯರ್ಥಿಗಳು ಇತರ ಪಕ್ಷಗಳಿಂದ ವಲಸೆ ಬಂದವರು.

ಹರ್ಯಾಣದಲ್ಲಿ ಬಿಜೆಪಿ ಸರ್ಕಾರವಿದ್ದರೂ, 10 ಬಿಜೆಪಿ ಅಭ್ಯರ್ಥಿಗಳ ಪೈಕಿ ಆರು ಮಂದಿ ವಲಸಿಗರಾಗಿದ್ದಾರೆ.

ಪಂಜಾಬ್‌ನಲ್ಲಿ ಬಿಜೆಪಿಯ 13 ಅಭ್ಯರ್ಥಿಗಳ ಪೈಕಿ 7 ಮಂದಿ ವಲಸಿಗರು. ಜಾರ್ಖಂಡ್‌ನಲ್ಲೂ 13 ಅಭ್ಯರ್ಥಿಗಳ ಪೈಕಿ 7 ಮಂದಿ ವಲಸಿಗರಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ 74 ಬಿಜೆಪಿ ಅಭ್ಯರ್ಥಿಗಳ ಪೈಕಿ 23 ಮಂದಿ (ಶೇ. 31ರಷ್ಟು) 2014ರಿಂದೀಚೆಗೆ ಬಿಜೆಪಿ ಸೇರಿದ ಇತರ ಪಕ್ಷದವರಾಗಿದ್ದಾರೆ.

ಒಡಿಶಾದಲ್ಲಿ ಒಟ್ಟು ಬಿಜೆಪಿ ಅಭ್ಯರ್ಥಿಗಳ ಪೈಕಿ ಶೇ. 29, ತಮಿಳುನಾಡಿನಲ್ಲಿ ಶೇ. 26ರಷ್ಟು ಮಂದಿ ವಲಸಿಗರಾಗಿದ್ದಾರೆ.

ಪಶ್ಚಿಮ ಬಂಗಾಳದ 42 ಬಿಜೆಪಿ ಅಭ್ಯರ್ಥಿಗಳ ಪೈಕಿ 19 ಮಂದಿ ವಲಸಿಗರಾಗಿದ್ದರೆ, ಗುಜರಾತ್‌ನಲ್ಲಿ 26 ಅಭ್ಯರ್ಥಿಗಳ ಪೈಕಿ ಇಬ್ಬರು ಇತರ ಪಕ್ಷಗಳಿಂದ ವಲಸೆ ಬಂದವರಾಗಿದ್ದಾರೆ ಎಂದು ವರದಿಗಳು ಮಾಹಿತಿ‌ ನೀಡಿವೆ.



Join Whatsapp