ತೆಲಂಗಾಣ: ಬಸ್-ಲಾರಿ ನಡುವೆ ಅಪಘಾತ, ಆರು ಮಂದಿ ಸಾವು

Prasthutha|

ಬಾಪಟ್ಲಾ: ಬಸ್ಸೊಂದು ಲಾರಿಗೆ ಡಿಕ್ಕಿ ಹೊಡೆದು ಆರು ಮಂದಿ ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಚಿಲ್ಕಲೂರಿಪೇಟೆಯಲ್ಲಿ ನಡೆದಿದೆ.

- Advertisement -

ಬಾಪಟ್ಲಾ ಜಿಲ್ಲೆಯ ಚಿನ್ನಗಂಜಾಂನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಬಸ್ಸೊಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.


ಡಿಕ್ಕಿಯ ನಂತರ ಎರಡು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಹೇಳಿದರು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಂಟೂರಿಗೆ ರವಾನಿಸಲಾಗಿದೆ. ಮೃತರನ್ನು ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ನಿವಾಸಿಗಳಾದ ಅಂಜಿ (35), ಉಪ್ಪಗುಂದೂರು ಕಾಶಿ (65), ಉಪ್ಪುಗುಂದೂರು ಲಕ್ಷ್ಮಿ (55), ಮತ್ತು ಮುಪ್ಪರಾಜು ಖ್ಯಾತಿ ಸಾಯಿಶ್ರೀ (8) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp