ಜಮ್ಮು-ಕಾಶ್ಮೀರ: ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ಜಮೀನು ದೇಣಿಗೆ ನೀಡಿದ ಮುಸ್ಲಿಂ ಕುಟುಂಬ

Prasthutha|

ಜಮ್ಮು-ಕಾಶ್ಮೀರ: ಇಲ್ಲಿಯ ರಿಯಾಸಿ ಜಿಲ್ಲೆಯಲ್ಲಿರುವ ಐತಿಹಾಸಿಕ ದೇವಸ್ಥಾನಕ್ಕೆ ಹೋಗಲು ಅಗತ್ಯವಿರುವ ರಸ್ತೆ ನಿರ್ಮಿಸಲು ಮುಸ್ಲಿಂ ಸಮುದಾಯದ ಕುಟುಂಬವೊಂದು ಬಿತ್ತನೆಗೆ ಯೋಗ್ಯವಾದ ಮುಕ್ಕಾಲು ಎಕರೆಯಷ್ಟು ಜಮೀನನ್ನು ದೇಣಿಗೆ ನೀಡಿದೆ.

- Advertisement -

ಐತಿಹಾಸಿಕ ಗುಪ್ತ ಕಾಶಿ ಗೌರಿ ಶಂಕರ ದೇವಸ್ಥಾನಕ್ಕೆ ತೆರಳಲು ನಿರ್ಮಿಸಲಿರುವ ರಸ್ತೆಗಾಗಿ ಸ್ವಯಂಪ್ರೇರಿತವಾಗಿ ಜಮೀನು ನೀಡಲು ನಿರ್ಧರಿಸಿದ್ದೇವೆ. ಇದನ್ನು ಎರಡೂ ಸಮುದಾಯಗಳು ಸ್ವಾಗತಿಸಿವೆ. ಹಲವು ವರ್ಷಗಳಿಂದಲೂ ಎರಡೂ ಸಮುದಾಯದವರು ಒಟ್ಟಿಗೆ ಜೀವಿಸುತ್ತಿದ್ದೇವೆ ಎಂದು ಜಮೀನು ನೀಡಿದ ನಾಲ್ಕು ಜನ ಸಹೋದರರ ಪೈಕಿ ಒಬ್ಬರಾದ ಗುಲಾಂ ರಸೂಲ್ ಪ್ರತಿಕ್ರಿಯಿಸಿದ್ದಾರೆ.

ರಿಯಾಸಿ ಜಿಲ್ಲಾ ಕೇಂದ್ರದಿಂದ 10 ಕಿ.ಮೀ. ದೂರದ ಕಾಶಿ ಪಟ್ಟ ಗ್ರಾಮದಲ್ಲಿರುವ ಶಿವನ ದೇವಾಲಯವನ್ನು ದೋಗ್ರಾ ರಾಜವಂಶಸ್ಥ ಮಹಾರಾಜ ಗುಲಾಬ್ ಸಿಂಗ್ ಅವರು 8ನೇ ಶತಮಾನದಲ್ಲಿ ನಿರ್ಮಿಸಿದ್ದರು ಎನ್ನಲಾಗಿದೆ. ಈ ದೇವಸ್ಥಾನಕ್ಕೆ ಇದುವರೆಗೂ ನಡೆದುಕೊಂಡೇ ಹೋಗಬೇಕಿದೆ.



Join Whatsapp