ಅಮರಿಕ: ಹಂದಿ ಕಿಡ್ನಿ ಅಳವಡಿಸಿಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಐತಿಹಾಸಿಕ ದಾಖಲೆಗೆ ಕಾರಣನಾದ ರಿಚರ್ಡ್ ಸ್ಲೇಮನ್ ಶಸ್ತ್ರಚಿಕಿತ್ಸೆಯ 2 ತಿಂಗಳ ಬಳಿಕ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ ಮೂಲದ 62 ವರ್ಷ ಪ್ರಾಯದ ರಿಚರ್ಡ್ ಸ್ಲೇಮನ್ ಅವರಿಗೆ 2024ರ ಮಾರ್ಚ್ 21 ರಂದು ಹಂದಿಯ ಕಿಡ್ನಿಯನ್ನು ಅಳವಡಿಸಲಾಗಿತ್ತು. ಬೋಸ್ಟನ್ನ ಮ್ಯಾಸಚುಸೆಟ್ಸ್ನ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಇದು ಭಾರೀ ಸುದ್ದಿಯಾಗಿತ್ತು. ಶಸ್ತ್ರಚಿಕಿತ್ಸೆ ನಡೆದ 2 ವಾರಗಳ ನಂತರ ಅವರು ಮನೆಗೆ ಮರಳಿದ್ದರು. ಹಂದಿಯ ಕಿಡ್ನಿಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.
ಇದು ಕೇವಲ ನನಗೆ ಮಾತ್ರ ಸಹಾಯ ಮಾಡುವುದಿಲ್ಲ, ಇದು ಬದುಕಲು ಕಿಡ್ನಿ ಕಸಿಗೆ ಒಳಗಾಗಲೇಬೇಕು ಎಂಬ ಸ್ಥಿತಿಯಲ್ಲಿರುವ ಅನೇಕರಿಗೆ ಒಂದು ಭರವಸೆಯ ಮಾರ್ಗವಾಗಿದೆ ಎಂದು ಅವರು ಕಸಿ ಪ್ರಕ್ರಿಯೆಗೆ ಒಳಗಾದ ಸಂದರ್ಭದಲ್ಲಿ ಹೇಳಿಕೊಂಡಿದ್ದರು.
ಒಂದು ಜಾತಿಯಿಂದ ಇನ್ನೊಂದಕ್ಕೆ ಅಂಗಗಳನ್ನು ಕಸಿ ಮಾಡುವ ವಿಧಾನವನ್ನು ಕ್ಸೆನೋಟ್ರಾನ್ಸ್ಪ್ಲಾಂಟೇಶನ್(xenotransplantation) ಎಂದು ಕರೆಯಲಾಗುತ್ತದೆ. ಈ ಹಿಂದೆ, ಹಂದಿಯ ಹೃದಯವನ್ನು ವ್ಯಕ್ತಿಯೊಬ್ಬರಿಗೆ ತಾತ್ಕಾಲಿಕವಾಗಿ ಕಸಿ ಮಾಡಲಾಗಿತ್ತು. ಆದರೆ ಒಂದು ತಿಂಗಳೊಳಗೆ ವ್ಯಕ್ತಿ ಸಾವನ್ನಪ್ಪಿದ್ದರು.ಈ ಹಿಂದೆ, ಹಂದಿಯ ಹೃದಯವನ್ನು ವ್ಯಕ್ತಿಯೊಬ್ಬರಿಗೆ ತಾತ್ಕಾಲಿಕವಾಗಿ ಕಸಿ ಮಾಡಲಾಗಿತ್ತು. ಆದರೆ ಒಂದು ತಿಂಗಳೊಳಗೆ ವ್ಯಕ್ತಿ ಸಾವನ್ನಪ್ಪಿದ್ದರು.2018 ರಲ್ಲಿ ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಸ್ಲೇಮನ್ ಎಂಬ ವ್ಯಕ್ತಿಗೆ ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಲಾಯಿತು. ಆದರೆ ಐದು ವರ್ಷಗಳ ನಂತರ ಅದು ವಿಫಲವಾಗಿತ್ತು.