ಪ್ರಜ್ವಲ್ ರೇವಣ್ಣ ಫೋಟೊ ಹಾಕಿಕೊಂಡು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ನವರು ಮತ ಕೇಳಲಿ: ರಮೇಶ್ ಬಾಬು

Prasthutha|

ತುಮಕೂರು: ಹೇಗೋ ಚುನಾವಣೆಗೆ ಇನ್ನೂ ಟೈಂ ಇದೆ. ಪ್ರಜ್ವಲ್ ರೇವಣ್ಣ ಫೋಟೊ ಹಾಕಿಕೊಂಡು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್‌ನವರು ಮತ ಕೇಳಲಿ ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಲೇವಡಿ ಮಾಡಿದ್ದಾರೆ.

- Advertisement -

ರಾಜ್ಯದ ವಿಧಾನ ಪರಿಷತ್ 6 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆ ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಈಗಾಗಲೇ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪ್ರಬುದ್ಧ ಶಿಕ್ಷಕ ಮತದಾರರು ಉತ್ತರ ಕೊಟ್ಟಿದ್ದಾರೆ. ಇನ್ನುಳಿದ ಕ್ಷೇತ್ರಗಳಲ್ಲಿ ಪ್ರಜ್ವಲ್ ಪೋಟೋ ಹಾಕಿಕೊಂಡು ಕ್ಯಾಂಪೇನ್ ಮಾಡಲಿ, ನಮಗೇನು ಅಭ್ಯಂತರ ಇಲ್ಲ. ನಾವು ಚುನಾವಣೆಯನ್ನ ಫೇಸ್ ಮಾಡುತ್ತೇವೆ ಎಂದಿದ್ದಾರೆ.

ರಮೇಶ್ ಬಾಬು ಜೆಡಿಎಸ್‌ನಿಂದ ಬಂದವರು ಎಂಬ ಆರೋಪ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಮಾಹಿತಿ ತಪ್ಪು. ಹಾಗೆ ನೋಡಿದರೆ ದೇವೇಗೌಡರು ಸಹ ಕಾಂಗ್ರೆಸ್‌ ಪಾರ್ಟಿಯಿಂದ ಬಂದವರು. ಈ ದೇಶದಲ್ಲಿ ಎಲ್ಲ ಪಾರ್ಟಿಗಳಿಗೆ ಮೂಲ, ಮಾತೃ ಪಾರ್ಟಿ ಕಾಂಗ್ರೆಸ್ ಪಕ್ಷವೇ ಆಗಿದೆ. ಹಾಗಾಗಿ ದೇವೇಗೌಡರು ಸಹ ಕಾಂಗ್ರೆಸ್ ಪಾರ್ಟಿಯಿಂದ ಬಂದವರಾಗಿದ್ದಾರೆ ಎಂದರು.

- Advertisement -

ನಾನು ಕಾಂಗ್ರೆಸ್‌ಗೆ ಬಂದು ಐದು ವರ್ಷ ಆಯ್ತು. ನಾನಾಗಿಯೇ ಜೆಡಿಎಸ್‌ನಿಂದ ಆಚೆ ಬಂದಿಲ್ಲ. ನನ್ನಂತಹವರನ್ನು, ಡಿಟಿ ಶ್ರೀನಿವಾಸ, ಮಧು ಬಂಗಾರಪ್ಪರಂತಹವರನ್ನು, ಪಿ.ಜಿ.ಆರ್.ಸಿಂಧ್ಯಾ, ಎಂಸಿ ನಾಣಯ್ಯ.. ಅಂತಹವರನ್ನೆಲ್ಲ ‘ಅವರೇ’ ಆಚೆ ಕಳಿಸಿದ್ದಾರೆ. ಜೆಡಿಎಸ್‌ನಲ್ಲಿ ಅಲ್ಲ, ಜನತಾದಳದಲ್ಲಿ ನಾನು ಕುಮಾರಸ್ವಾಮಿಗಿಂತ ಸೀನಿಯರ್. ಅವರು ನನ್ನನ್ನು ನಡೆಸಿಕೊಂಡ ರೀತಿ ನಮ್ಮಂತಹವರೇ ಬಿಟ್ಟುಹೋಗುವಂತಹ ವಾತಾವರಣ ನಿರ್ಮಾಣದ್ದಾಗಿತ್ತು ಎಂದು ರಮೇಶ್ ಬಾಬು ತಿರುಗೇಟು ನೀಡಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ವಕ್ತಾರರು ಆಗಿದ್ದ ರಮೇಶ್ ಬಾಬು ಜೆಡಿಎಸ್‌ ಗೆ ರಾಜೀನಾಮೆ ನೀಡಿ, 19 ಸೆಪ್ಟಂಬರ್ 2020 ರಲ್ಲಿ ಕಾಂಗ್ರೆಸ್ ಸೇರಿದ್ದರು.



Join Whatsapp