ಕ್ರೂಸರ್ ವಾಹನ ಪಲ್ಟಿ: ಮೂವರು ಮಹಿಳೆಯರು ಮೃತ್ಯು

Prasthutha|

ಬೆಳಗಾವಿ: ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಜತ್ತ ಬಳಿ ನಡೆದಿದೆ.

- Advertisement -


ಮಹಾದೇವಿ ಚೌಗಲಾ, ಗೀತಾ ದೊಡಮನಿ ಹಾಗೂ ಕಸ್ತೂರಿ ಮೃತರು. ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗುವಾಗ ಕ್ರೂಸರ್ ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿದೆ. ಈ ವೇಳೆ ಮೂವರು ಕೊನೆಯುಸಿರೆಳೆದರೆ, ಹಲವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.



Join Whatsapp