ಕಾಂಗ್ರೆಸ್ ತಪ್ಪುಗಳನ್ನು ಮಾಡಿದೆ, ರಾಜಕಾರಣವನ್ನು ಬದಲಿಸಿಕೊಳ್ಳಬೇಕಿದೆ: ರಾಹುಲ್ ಗಾಂಧಿ

Prasthutha|

ಕ್ನೋ: ಕಾಂಗ್ರೆಸ್ ಪಕ್ಷವೂ ತಪ್ಪುಗಳನ್ನು ಮಾಡಿದೆ ಮತ್ತು ಭವಿಷ್ಯದಲ್ಲಿ ಕಾಂಗ್ರೆಸ್ ರಾಜಕಾರಣವನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಒಬ್ಬ ರಾಜನ ತರಹ ಆಡುತ್ತಿದ್ದಾರೆಯೇ ಹೊರತು ಪ್ರಧಾನಿಯಂತಲ್ಲ. ಅವರು ಇಬ್ಬರು-ಮೂವರು ಉದ್ಯಮಿಗಳ ಮುಂದಾಳು ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ತನ್ನ ರಾಜಕಾರಣವನ್ನು ಬದಲಿಸಿಕೊಳ್ಳಬೇಕಿದೆ. ಅದು ಆಗಲೇಬೇಕು. ಕಾಂಗ್ರೆಸ್​ ಕೂಡ ತಪ್ಪುಗಳನ್ನು ಮಾಡಿದೆ ಎಂದು ನಾನು ಪಕ್ಷ ಸೇರಿದಾಗಿನಿಂದಲೂ ಹೇಳುತ್ತಿದ್ದೇನೆ ಎಂದು ಇದೇ ಸಂದರ್ಭದಲ್ಲಿ ರಾಹುಲ್ ಹೇಳಿದರು.

- Advertisement -

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚೆಗೆ ನಾನು ಸಿದ್ಧವಾಗಿದ್ದೇನೆ ಎಂದ ರಾಹುಲ್ ಗಾಂಧಿ, ಆದರೆ ಅದಕ್ಕೆ ಪ್ರಧಾನಿ ಮೋದಿ ಸಿದ್ಧರಿಲ್ಲ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯವನ್ನು ಬದಲಾಯಿಸಬೇಕಾಗಿದೆ ಎಂದು‌ ಪ್ರತಿಪಾದಿಸಿದರು.



Join Whatsapp