ಅಜ್ಮೀರ್ ಮಸೀದಿ ಹಿಂದೆ ಜೈನ ದೇವಾಲಯ ಆಗಿತ್ತು: ಸಂಘಪರಿವಾರ

Prasthutha|

ರಾಜಸ್ಥಾನ: ಅಜ್ಮೀರ್ ಮಸೀದಿ ಈ ಹಿಂದೆ ಜೈನ ದೇವಾಲಯವಾಗಿತ್ತು ಎಂದು ಸಂಘ ಪರಿವಾರ ಪ್ರತಿಪಾದಿಸಿದೆ. ಅಜ್ಮೀರ್‌ನ ಬಿಜೆಪಿ ನಾಯಕರು ‘ಅಯೋಧ್ಯೆ, ಕಾಶಿ ಮತ್ತು ಮಥುರಾ ಮಾದರಿಯಲ್ಲಿ ಇಲ್ಲಿನ ಜೈನ ಸ್ಮಾರಕವನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

- Advertisement -

ರಾಜಸ್ಥಾನದ ಅಜ್ಮೀರ್‌ನಲ್ಲಿರುವ ‘ಅಧೈ ದಿನ್ ಕಾ ಜೊನ್‌ಪ್ರಾ’ ಐತಿಹಾಸಿಕ ಮಸೀದಿಗೆ ಸಂಘ ಪರಿವಾರದ ಮುಖಂಡರು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯರು ಹಾಗೂ ಜೈನ ಸನ್ಯಾಸಿಗಳ ನಿಯೋಗ ಮಂಗಳವಾರ ಭೇಟಿ ನೀಡಿತ್ತು. ಬಳಿಕ ನಿಯೋಗ, ಈ ಹಿಂದೆ ಆ ಸ್ಥಳದಲ್ಲಿ ಜೈನ ದೇವಾಲಯಗಳಿದ್ದವು ಎಂದು ಪ್ರತಿಪಾದಿಸಿದೆ.

ಅಜ್ಮೀರ್ ಮಸೀದಿಗೆ ನಾವು ಭೇಟಿ ನೀಡಿದಾಗ ನಾವು ಅಲ್ಲಿ ಗಣೇಶ್ ಅಥವಾ ಯಕ್ಷನನ್ನು ಹೋಲುವ ತೀರ್ಥಂಕರರು ಹಾಗೂ ದೇವತೆಗಳ ವಿಗ್ರಹಗಳನ್ನು ನೋಡಿದ್ದೇವೆ. ಈ ವಿಗ್ರಹಗಳನ್ನು ಇರಿಸಲಾಗಿರುವ ಕೊಠಡಿಗಳ ಕೀಲಿಕೈ ಲಭ್ಯವಾಗದ ಕಾರಣ ನಾವು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಮೊಘಲರು ಭಾರೀ ಪ್ರಭಾವ ಹೊಂದಿದ್ದ ಕಾಲದಲ್ಲಿ ಅವರು ಹಳೆಯ ಸ್ಮಾರಕಗಳನ್ನು ಬದಲಾಯಿಸಿ, ಅತೀ ಕಡಿಮೆ ಸಮಯದಲ್ಲಿ ಹೊಸ ರೂಪ ನೀಡಿದ್ದರಿಂದ ಇದನ್ನು ‘ಅಧೈ ದಿನ್ ಕಾ ಜೊನ್ಪ್ರಾ’ ಎಂದು ಕರೆಯಲಾಗುತ್ತಿರುವ ಸಾಧ್ಯತೆಯಿದೆ ಎಂದು ಜೈನ ಸನ್ಯಾಸಿ ಸುನೀಲ್ ಸಾಗರ್ ಹೇಳಿದ್ದಾರೆ.



Join Whatsapp