ಹೊಸದಿಲ್ಲಿ : ಕೋವಿಡ್ -19 ಸಾಂಕ್ರಾಮಿಕ ರೋಗದ ತನ್ನ ಲಸಿಕೆಯನ್ನು ವಿಶ್ವಾದ್ಯಂತ ಹಿಂತೆಗೆಯುವುದಾಗಿ ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪೆನಿ ಅಸ್ಟ್ರಾಜೆನೆಕಾ ಹೇಳಿದೆ.
ಸಾಂಕ್ರಾಮಿಕ ರೋಗದ ನಂತರ ಲಭ್ಯವಿರುವ ನವೀಕರಿಸಿದ ಲಸಿಕೆಗಳ ಹೆಚ್ಚುವರಿಯಿಂದಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಕೋವಿಡ್ ನ ವಿವಿಧ ತಳಿಗಳು ಕಂಡು ಬರುತ್ತಿರುವುದರಿಂದ ಅಸ್ಟ್ರಾಜೆನೆಕಾ ಉತ್ಪಾದಿಸುತ್ತಿರುವ ವ್ಯಾಕ್ಸ್ಝೆವ್ರಿಯಾ ಲಸಿಕೆಗೆ ಬೇಡಿಕೆ ಕಡಿಮೆಯಾಗಿ ಕುಸಿತಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಇನ್ನು ಮುಂದೆ ಆ ಲಸಿಕೆಯನ್ನು ತಯಾರಿಸುವುದಿಲ್ಲ ಅಥವಾ ಸರಬರಾಜು ಮಾಡುವುದಿಲ್ಲ ಎಂದು ಕಂಪೆನಿ ಹೇಳಿದೆ.
ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ ಎಣಿಕೆಗಳಂತಹ ಅಡ್ಡ-ಪರಿಣಾಮಗಳನ್ನು ತಮ್ಮ ಲಸಿಕೆ ಉಂಟುಮಾಡುತ್ತದೆ ಎಂದು ಆಂಗ್ಲೋ-ಸ್ವೀಡಿಷ್ ಔಷಧಿ ತಯಾರಕ ಕಂಪೆನಿ ಅಸ್ಟ್ರಾಜೆನೆಕಾ ಲಂಡನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಈ ಹಿಂದೆ ಒಪ್ಪಿಕೊಂಡಿದೆ.