ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಎಲ್ಲಿದ್ದಾರೆಂದು ಗೊತ್ತಿಲ್ಲ ಎಂದು ಇಂಟರ್‌ಪೋಲ್ ಎಸ್‌ಐಟಿಗೆ ಪ್ರತಿಕ್ರಿಯಿಸಿದೆ.
ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ಎಸ್‌ಐಟಿ ತಂಡ ಇಂಟರ್‌ಪೋಲ್‌ಗೆ ನೋಟಿಸ್ ನೀಡಿತ್ತು. ಈ ನೋಟಿಸ್‌ಗೆ ಇಂಟರ್‌ಪೋಲ್ ಉತ್ತರಿಸಿದೆ. ಸಿಬಿಐ ಮೂಲಕ ಎಸ್‌ಐಟಿಗೆ ಮಾಹಿತಿ ರವಾನೆಯಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್, ಅದರ ಬೆನ್ನಲ್ಲೇ ಬ್ಲ್ಯೂ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಇಷ್ಟಾದರೂ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ಇಂಟರ್‌ಪೋಲ್‌ಗೂ ಎಸ್‌ಐಟಿ ನೋಟಿಸ್ ನೀಡಿತ್ತು. ಈ ನೋಟಿಸ್‌ಗೆ ಇಂಟರ್‌ಪೋಲ್ ಉತ್ತರ ನೀಡಿದೆ.
196 ದೇಶಗಳಿಗೆ ನೋಟಿಸ್ ತಲುಪಿಸಲಾಗಿದೆ. ಕರ್ನಾಟಕದ ಏರ್ ಪೋರ್ಟ್, ಬಂದರುಗಳು ಹಾಗೂ ಬಾರ್ಡರ್, ಚೆಕ್ ಪೋಸ್ಟ್ ಎಲ್ಲಾ ಕಡೆಯೂ ಅಲರ್ಟ್ ಘೋಷಿಸಿಲಾಗಿದೆ. ಪ್ರಜ್ವಲ್ ರೇವಣ್ಣ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಕ್ಷಣ ಹೇಳುವಂತೆ ಇಂಟರ್ ಪೋಲ್ ಹೇಳಿದೆ. ಸದ್ಯ ಎಲ್ಲಾ ದೇಶಗಳಲ್ಲೂ ಪ್ರಜ್ವಲ್ ರೇವಣ್ಣನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಇಂಟರ್‌ಪೋಲ್ ಎಸ್‌ಐಟಿಗೆ ತಿಳಿಸಿದೆ.
ಹಲವು ಮುಗ್ಧ ಹೆಣ್ಣುಮಕ್ಕಳನ್ನು ಬೆದರಿಸಿ, ಆಮಿಷ ಒಡ್ಡಿ ಲೈಂಗಿಕ ದೌರ್ಜನ್ಯ, ಶೋಷಣೆ, ಅತ್ಯಾಚಾರ ಮಾಡಿರುವ ಗಂಭೀರ ಸ್ವರೂಪದ ಆರೋಪಗಳು ಪ್ರಜ್ವಲ್ ವಿರುದ್ಧ ಕೇಳಿಬಂದಿವೆ. ಶೋಷಣೆಗೆ ಒಳಗಾದ ಸಂತ್ರಸ್ತ ಹೆಣ್ಣುಮಕ್ಕಳಿಂದ ದೂರು ಸ್ವೀಕರಿಸಲು ಎಸ್‌ಐಟಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆ ಆರಂಭಿಸಿದ್ದು, ಗೌಪ್ಯತೆಯನ್ನು ಕಾಪಾಡಿಕೊಳ್ಳುವುದಾಗಿ ಭರವಸೆ ನೀಡಿದೆ.