ಇಂದು, ನಾಳೆ ಕೇರಳ ಮತ್ತು ತಮಿಳುನಾಡು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ

Prasthutha|

ತಿರುವನಂತಪುರಂ: ಶನಿವಾರ ಮತ್ತು ಭಾನುವಾರದಂದು ಕೇರಳದ ಕರಾವಳಿ ಪ್ರದೇಶಗಳಲ್ಲಿ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ಸಮುದ್ರ ಅಬ್ಬರಿಸಲಿದ್ದು, ಈ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಠಾತ್ ಆಗಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಎಚ್ಚರಿಕೆಯನ್ನು ನೀಡಲಾಗಿದೆ.ಮೇ 4 ಮತ್ತು 5 ರಂದು ಕೇರಳ ಕರಾವಳಿಯಲ್ಲಿ ಮುಂಜಾನೆ 2.30 ರಿಂದ ರಾತ್ರಿ 11.30 ರವರೆಗೆ ಹೆಚ್ಚಿನ ಶಕ್ತಿಯ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

- Advertisement -

ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸಮುದ್ರಗಳ ಹಠಾತ್ ಉಬ್ಬರವಿಳಿತದ ವಿದ್ಯಮಾನಕ್ಕೆ ಮೊದಲ ಬಾರಿಗೆ ರೆಡ್ ಅಲರ್ಟ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ಮತ್ತು ದಕ್ಷಿಣ ತಮಿಳುನಾಡಿನ ಕರಾವಳಿ ಪ್ರದೇಶಗಳಿಗೆ ಸಂಭವನೀಯ ‘ಕಲ್ಲಕ್ಕಡಲ್’ ವಿದ್ಯಮಾನದ ಕುರಿತು ಎಚ್ಚರಿಕೆ ನೀಡಿದೆ.

- Advertisement -

ಹಠಾತ್ ಭಾರಿ ಅಲೆಗಳು ಏಳುವುದನ್ನು ‘ಕಲ್ಲಕ್ಕಡಲ್’ ಎಂದು ಕರೆಯಲಾಗುತ್ತದೆ. ಕಲ್ಲಕಡಲ್ ಎಂದರೆ ಕಳ್ಳನಂತೆ ಇದ್ದಕ್ಕಿದ್ದಂತೆ ಬರುವ ಸಮುದ್ರದ ಅಲೆಗಳು.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಇದೇ ಮೊದಲ ಬಾರಿಗೆ ‘ಕಲ್ಲಕ್ಕಡಲ್’ ವಿಚಾರದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.



Join Whatsapp