ಕೋವಿಶೀಲ್ಡ್ ತೆಗೆದುಕೊಳ್ಳಬೇಡಿ ಎಂದು ಪುನೀತ್’ಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್ ವೈರಲ್

Prasthutha|

ಬೆಂಗಳೂರು: ಕೋವಿಶೀಲ್ಡ್ ಲಸಿಕೆ ಪಡೆದವರ ಮೇಲ ಅಡ್ಡಪರಿಣಾಮ ಉಂಟಾಗಲಿದೆ ಎಂದು ಕೊರೊನಾ ಔಷಧಗಳ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ ಇತ್ತೀಚೆಗೆ ಒಪ್ಪಿಕೊಂಡಿದೆ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ಕುರಿತ ಪೋಸ್ಟ್ ಒಂದು ವೈರಲ್ ಆಗಿದೆ.

- Advertisement -


ಪುನೀತ್ ರಾಜ್ಕುಮಾರ್ ಅವರು 2021ರ ಏಪ್ರಿಲ್ 7ರಂದು ವ್ಯಾಕ್ಸಿನ್ ಪಡೆದಿದ್ದಾಗಿ ಪೋಸ್ಟ್ ಮಾಡಿದ್ದರು. ‘ನೀವು 45 ವರ್ಷ ಮೇಲ್ಪಟ್ಟಿದ್ದರೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ’ ಎಂದು ಮನವಿ ಮಾಡಿದ್ದರು. ಇದಕ್ಕೆ ಬೃಂದಾವನಾ ಹೆಸರಿ ಖಾತೆಯಿಂದ ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದರು. ‘ಕೋವಿಶೀಲ್ಡ್ ತೆಗೆದುಕೊಳ್ಳಬೇಡಿ. 45 ವರ್ಷ ಮೇಲ್ಪಟ್ಟವರಿಗೆ ಇದು ಒಳ್ಳೆಯದಲ್ಲ’ ಎಂದು ಬರೆಯಲಾಗಿತ್ತು. ಸದ್ಯ ಈ ಪೋಸ್ಟ್ ಮತ್ತೆ ವೈರಲ್ ಆಗುತ್ತಿದೆ. ಕೋವಿಶೀಲ್ಡ್ನಿಂದಲೇ ಪುನೀತ್ ಅವರ ರಕ್ತನಾಳದಲ್ಲಿ ಬ್ಲಡ್ ಕ್ಲಾಟ್ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ. ಈಗ ಕೋವಿಶೀಲ್ಡ್ ತೆಗೆದುಕೊಂಡಿದ್ದರಿಂದಲೇ ಪುನೀತ್ಗೆ ಹೃದಯಾಘಾತ ಆಯಿತು ಎಂದು ಕೆಲವರು ಆರೋಪಿಸಿದ್ದಾರೆ.



Join Whatsapp