ನವದೆಹಲಿ: ರಾಷ್ಟ್ರಪತಿ ದ್ರೌಪತಿ ಮುರ್ಮು ಇಂದು ಮೊದಲ ಬಾರಿಗೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ಆದಿವಾಸಿ ಎಂಬ ಕಾರಣಕ್ಕೆ ಅಯೋಧ್ಯೆಯ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವರಿಗೆ ಅವಕಾಶ ನೀಡಿರಲಿಲ್ಲ ಎಂದು ಹೇಳಲಾಗುತ್ತಿರುವ ಮತ್ತು ಲೊಕಸಭಾ ಚುನವಣೆಯಲ್ಲಿ ಇದು ಗಂಭೀರ ಪರಿಣಾಮ ಉಂಟುಮಾಡಲಿದೆ ಎಂದು ಅಂದಾಜಿಸಲಾಗುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ಶ್ರೀ ಹನುಮಾನ್ ಗಢಿ ದೇವಸ್ಥಾನ, ಪ್ರಭು ಶ್ರೀರಾಮ ದೇವಸ್ಥಾನ ಹಾಗೂ ಕುಬೇರ್ ಟೀಲಾಗೆ ಭೇಟಿ ನೀಡಲಿರುವ ದ್ರೌಪದಿ ಮುರ್ಮು ಅವರು ದರ್ಶನ ಪಡೆದು, ಆರತಿ ನೆರವೇರಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
ನೂತನ ಸಂಸತ್ ಭವನ ಉದ್ಘಾಟನೆಯಾದಾಗ ಹಾಗೂ ಬಾಲರಾಮನ ಪ್ರತಿಷ್ಠಾಪನೆ ನೆರವೇರಿದಾಗ, ರಾಷ್ಟ್ರಪತಿ ಅವರನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಹ್ವಾನಿಸಿರಲಿಲ್ಲ.