ಜಮ್ಮು-ಕಾಶ್ಮೀರದ ಅನಂತ್ ನಾಗ್- ರಜೌರಿ ಲೋಕಸಭಾ ಚುನಾವಣೆ ಮೇ.25ಕ್ಕೆ ಮುಂದೂಡಿದ ಆಯೋಗ

Prasthutha|

ಶ್ರೀನಗರ: ಮೇ.07 ರಂದು ನಡೆಯಬೇಕಿದ್ದ ಜಮ್ಮು-ಕಾಶ್ಮೀರದ ಅನಂತ್ ನಾಗ್- ರಜೌರಿ ಲೋಕಸಭಾ ಚುನಾವಣೆಯನ್ನು ಮೇ.25 ಕ್ಕೆ ಮುಂದೂಡಲಾಗಿದೆ.

- Advertisement -

ಪ್ರತಿಕೂಲ ವಾತಾವರಣದ ಕಾರಣದಿಂದಾಗಿ ಚುನಾವಣೆಯನ್ನು ಮುಂದೂಡುವಂತೆ ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ರವೀಂದ್ರ ರೈನಾ, ಜಮ್ಮು-ಕಾಶ್ಮೀರದ ಅಪ್ನಿ ಪಕ್ಷದ ಮುಖ್ಯಸ್ಥ ಅಲ್ತಾಫ್ ಬುಕಾರಿ, ಪೀಪಲ್ಸ್ ಕಾನ್ಫರೆನ್ಸ್ ನಾಯಕ ಇಮ್ರಾನ್ ಅನ್ಸಾರಿ ಹಾಗೂ ಇತರರು ಆಯೋಗಕ್ಕೆ ಮನವಿ ಮಾಡಿದ್ದರು.

ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಯುವ ಸ್ಥಳಗಳಲ್ಲಿನ ವಾತಾವರಣದ ಬಗ್ಗೆ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಜಮ್ಮು-ಕಾಶ್ಮೀರದ ಆಡಳಿತಕ್ಕೆ ಸೂಚನೆ ನೀಡಿತ್ತು.

- Advertisement -

ಆಯೋಗದ ಅಧಿಕೃತ ಹೇಳಿಕೆಯ ಪ್ರಕಾರ ಮೇ.25 ರಂದು ಚುನಾವಣೆ ನಡೆಯಲಿದೆ.



Join Whatsapp