ಛತ್ತೀಸ್ ಗಢ: ಕಾರಿಗೆ ಡಿಕ್ಕಿ ಹೊಡೆದ ಪಿಕಪ್, 10 ಮಂದಿ ಸಾವು

Prasthutha|

ಬೆಮೆತಾರಾ: ಛತ್ತೀಸ್ ಗಢದ ಬೆಮೆತಾರಾದಲ್ಲಿ ಹೆದ್ದಾರಿಯಲ್ಲಿ ನಿಂತಿದ್ದ ಕಾರಿಗೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ 3 ಮಕ್ಕಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. 23 ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ರಾಯ್ ಪುರ ಏಮ್ಸ್ ಗೆ ದಾಖಲಿಸಲಾಗಿದೆ.

- Advertisement -

ಕುಟುಂಬದ ಕಾರ್ಯಕ್ರಮದ ನಿಮಿತ್ತ ಹಲವು ಮಂದಿ ಟ್ರಕ್ ನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ.
ಮೃತರು ಪಥರಾ ಗ್ರಾಮದವರಾಗಿದ್ದು, ತಿರೈಯಾ ಗ್ರಾಮದಲ್ಲಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.



Join Whatsapp