ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವಿಶೇಷ ಸಶಸ್ತ್ರ ಪಡೆಯ ಯೋಧ ಆತ್ಮಹತ್ಯೆ

Prasthutha|

ಗರಿಯಾಬಂದ್: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವಿಶೇಷ ಸಶಸ್ತ್ರ ಪಡೆಯ ಯೋಧನೊಬ್ಬ ತನ್ನ ಸರ್ವಿಸ್​ ರೈಫಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಮಧ್ಯಪ್ರದೇಶದ ವಿಶೇಷ ಸಶಸ್ತ್ರ ಪಡೆಯ 34ನೇ ಬೆಟಾಲಿಯನ್​ಗೆ ಸೇರಿದ ಹೆಡೆ ಕಾನ್​ಸ್ಟೆಬಲ್​ ಜಿಯಾಲಾಲ್​ ಪವಾರ್​ ಮೃತರು.

ಗರಿಯಾಬಂದ್ ಮಹಾಸಮುಂಡ್ ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಹಂತದ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯುತ್ತಿದ್ದಾಗ ಪಿಪಾರ್ಚೇಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಡೆದದಾರ್ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯೊಂದರಲ್ಲಿ ಬೆಳಿಗ್ಗೆ 9.30 ರ ಸುಮಾರಿಗೆ ಸೈನಿಕ ಜಿಯಾಲಾಲ್​ ರೈಫಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಸೈನಿಕ ಜಿಯಾಲಾಲ್​ ಅವರು ಚುನಾವಣಾ ಕರ್ತವ್ಯಕ್ಕೆ ಭದ್ರತಾ ಸಿಬ್ಬಂದಿಯ ತಂಡದಲ್ಲಿದ್ದರು. ಅವರನ್ನು ಮೀಸಲು ತಂಡದಲ್ಲಿರಿಸಲಾಗಿತ್ತು.

ಮಾಹಿತಿ ತಿಳಿದ ಕೂಡಲೇ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ಯಾವುದೇ ಡೆತ್​ ನೋಟ್ ಪತ್ತೆಯಾಗಿಲ್ಲ, ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp