ಸಂಪತ್ತು ಮರುಹಂಚಿಕೆ ಮಾಡಲು ರಾಹುಲ್ ಗಾಂಧಿಯೇನು ಮಾವೋವಾದಿಯಾ: ದೇವೇಗೌಡ ಪ್ರಶ್ನೆ

Prasthutha|

- Advertisement -

ಹಾಸನ: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿರುವ ಸಂಪತ್ತು ಮರುಹಂಚಿಕೆ ವಿಚಾರದ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಸಂಪತ್ತು ಮರುಹಂಚಿಕೆ ವಿಚಾರವನ್ನು ಪ್ರಸ್ತಾಪಿಸುತ್ತಾ, ಇದು ಕಾಂಗ್ರೆಸ್ ಪಕ್ಷದ ಇಬ್ಬರು ಮಾಜಿ ಪ್ರಧಾನಿಗಳಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದಾರೆ. ದೇಶದಲ್ಲಿ ಉದಾರೀಕರಣ ನೀತಿ ಜಾರಿಗೆ ತಂದಿದ್ದ ಪಿ.ವಿ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರನ್ನು ಗೌಡರು ಪ್ರಸ್ತಾಪಿಸಿದ್ದರು.

- Advertisement -

ಕಾಂಗ್ರೆಸ್ ಪಕ್ಷ ತನ್ನ ಚನಾವಣಾ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದೆ. ಅಧಿಕಾರಕ್ಕೆ ಬರುವ ವಿಶ್ವಾಸ ಇಲ್ಲದ ಪಕ್ಷದಿಂದ ಮಾತ್ರ ಇಂತಹ ಆಶ್ವಾಸನೆಗಳು ಬರಲು ಸಾಧ್ಯ. ಕಾಂಗ್ರೆಸ್ಸಿಗರು ಈ ದೇಶವನ್ನು ಕೆಳಗೆ ಕೊಂಡೊಯ್ಯಲು ಹೊರಟಿದ್ದಾರೆ. ಯಾವುದೇ ರೀತಿಯಿಂದಲಾದರೂ ಅಧಿಕಾರ ಪಡೆಯಬೇಕೆನ್ನುವ ಹತಾಶೆ ಅವರಲ್ಲಿರುವುದು ಸ್ಪಷ್ಟವಾಗಿದೆ ಎಂದು ಜೆಡಿಎಸ್ ಮುಖ್ಯಸ್ಥರಾದ ದೇವೇಗೌಡರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



Join Whatsapp