ಹುಬ್ಬಳ್ಳಿ: ‘ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಎಲ್ಲಿಂದಲೋ ಪೇಮೆಂಟ್ ಬಂದಿದೆ. ಅದಕ್ಕೆ ಸ್ಪರ್ಧಿಸಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ಪೇಮೆಂಟ್ ಮಾಡಿದ್ದಾರೆ ಎನ್ನುವುದನ್ನು ಮೇ 7ರ ನಂತರ ಹೇಳುವೆ ಎಂದು ತಿಳಿಸಿದರು.
ಮೊದಲು ಶಾಸಕ ವಿನಯ ಕುಲಕರ್ಣಿ ಅವರು ಸ್ವಾಮೀಜಿ ಅವರನ್ನು ಬೇಕಾಬಿಟ್ಟಿ ಬಯ್ಯುತ್ತಿದ್ದರು. ಈಗ ಹೊಗಳುತ್ತಿದ್ದಾರೆ ಎಂದರೆ ಪೇಮೆಂಟ್ ಆಗಿದೆ ಎಂದೇ ಅರ್ಥ ಎಂದು ವ್ಯಂಗ್ಯವಾಡಿದರು.