ಭಾರಿ ಮಳೆಗೆ ದುಬೈ ತತ್ತರ: ಪ್ರಯಾಣ ಮುಂದೂಡುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ

Prasthutha|

ಅಬುಧಾಬಿ: ಯುಎಇಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹದ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಪರಿಸ್ಥಿತಿ ಮರಳುವವರೆಗೂ ತಮ್ಮ ಅನಗತ್ಯ ಪ್ರವಾಸವನ್ನು ಮುಂದೂಡುವಂತೆ ದುಬೈಗೆ ಆಗಮಿಸುವ ಅಥವಾ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಭಾರತೀಯರಿಗೆ ಯುಎಇಯಲ್ಲಿನ ಭಾರತಿಯ ರಾಯಭಾರ ಕಚೇರಿಯು ಶುಕ್ರವಾರ ಸಲಹೆ ನೀಡಿದೆ.

- Advertisement -

ದುಬೈನ ಭಾರತೀಯ ಕಾನ್ಸುಲೇಟ್, ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಈಗಾಗಲೇ ಸಹಾಯವಾಣಿಯನ್ನೂ ಆರಂಭಿಸಿದ್ದಾರೆ. ಅನಿಶ್ಚಿತತೆಯ ವಾತಾವರಣದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟಕ್ಕೆ ತೊಡಕಾಗಿದ್ದು, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ ಎಂದೂ ರಾಯಭಾರ ಕಚೇರಿ ತಿಳಿಸಿದೆ. ಸದ್ಯದ ಪರಿಸ್ಥಿತಿ ಅನಿಶ್ಚಿತತೆಯಿಂದ ಕೂಡಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಅಧಿಕಾರಿಗಳು 24 ಗಂಟೆ ಶ್ರಮಿಸುತ್ತಿದ್ದಾರೆ.



Join Whatsapp