ವೈದ್ಯಕೀಯ ಜಾಮೀನಿಗಾಗಿ ಕೇಜ್ರಿವಾಲ್ ಸಕ್ಕರೆ ಅಂಶದ ಆಹಾರ ಸೇವಿಸುತ್ತಿದ್ದಾರೆ: ಇಡಿ ಆರೋಪ

Prasthutha|

ನವದೆಹಲಿ: ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ ‘ಶುಗರ್’ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.

- Advertisement -


ಅರವಿಂದ್ ಕೇಜ್ರಿವಾಲ್ ಗೆ ಸಕ್ಕರೆ ಖಾಯಿಲೆ ಇದ್ದು, ಇವರು ಜೈಲಲ್ಲಿ ಉದ್ದೇಶಪೂರ್ವಕವಾಗಿಯೇ ಟೀ ಸಮಯದಲ್ಲಿ ಮಾವು, ಸಿಹಿ ತಿನಿಸುಗಳನ್ನು ಯಥೇಚ್ಛವಾಗಿ ತಿನ್ನುತ್ತಿದ್ದಾರೆ. ಇಷ್ಟು ದಿನ ಸಕ್ಕರೆ ರಹಿತ ಚಹಾ ಸೇವಿಸುತ್ತಿದ್ದ ಕೇಜ್ರಿವಾಲ್ ಈಗ ಸಕ್ಕರೆ ಸಹಿತ ಚಹಾ ಕುಡಿಯುತ್ತಿದ್ದಾರೆ. ಇದರಿಂದ ತಮ್ಮ ದೇಹದಲ್ಲಿನ ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಿಕೊಂಡು ವೈದ್ಯಕೀಯ ಪರಿಸ್ಥಿತಿ ಆಧಾರದಲ್ಲಿ ಜಾಮೀನು ಪಡೆಯುವ ಉದ್ದೇಶ ಅವರದ್ದಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಕೋರ್ಟ್ ಗೆ ಗುರುವಾರ ಮಾಹಿತಿ ನೀಡಿದ್ದಾರೆ.

ನಾಳೆಯೊಳಗೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದು, ನ್ಯಾಯಾಲಯವು ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.



Join Whatsapp