ಮುಂಬೈ: ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾಗೆ ಸೇರಿದ ಅಂದಾಜು 98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ (ED) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡಿದ ಆಸ್ತಿಯಲ್ಲಿ ಮುಂಬೈನ ಪ್ರತಿಷ್ಠಿತ ಜುಹುವಿನಲ್ಲಿರುವ ಅಪಾರ್ಟ್ ಮೆಂಟ್ ಕೂಡ ಸೇರಿದೆ. ರಾಜ್ ಅವರ ಹೆಸರಿನಲ್ಲಿರುವ ಮುಂಬೈನ ಜುಹುನಲ್ಲಿರುವ ವಸತಿ ಫ್ಲಾಟ್ ಮತ್ತು ಪುಣೆಯಲ್ಲಿರುವ ವಸತಿ ಬಂಗಲೆ ಮತ್ತು ಕುಂದ್ರಾ ಅವರ ಹೆಸರಿನಲ್ಲಿರುವ ಈಕ್ವಿಟಿ ಷೇರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಫೆಡರಲ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.
ಬಿಟ್ಕಾಯಿನ್ಗಳ ಬಳಕೆಯ ಮೂಲಕ ಹೂಡಿಕೆದಾರರ ಹಣವನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಆಸ್ತಿ ಜಪ್ತಿ ಮಾಡಿದೆ.