ಕೋಝಿಕ್ಕೋಡ್: ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಾರಂದೂರು ಮರ್ಕಝ್ ಸೆಂಟರ್ ಆಫ್ ಎಕ್ಸಲೆನ್ಸ್, ಪುನೂರು ಜಾಮಿಯಾ ಮದೀನತುನ್ನೂರಿನ ಹಳೆ ವಿದ್ಯಾರ್ಥಿ ಅಬ್ದುಲ್ ಫಝಲ್ ನೂರಾನಿ ಅವರು 507 ನೇ ರ್‍ಯಾಂಕ್ ಗಳಿಸಿದ್ದಾರೆ.
ಫಝಲ್ ನೂರಾನಿ ಅವರು ಮಲಪ್ಪುರಂ ಜಿಲ್ಲೆಯ ಪರಪನಂಙಾಡಿಯ ಬಾವಾ -ಅಸ್ರಾಬೀ ದಂಪತಿಯ ಪುತ್ರ.
ಮರ್ಕಝ್ ಗಾರ್ಡನ್ ಸಿವಿಲ್ ಸರ್ವಿಸ್ ಕೋಚಿಂಗ್ ಸೆಂಟರ್ ನಲ್ಲಿ ಪ್ರಾಥಮಿಕ ತರಬೇತಿಯ ನಂತರ ಫಝಲ್ ಅವರು ದಿಲ್ಲಿಯ ಜಾಮಿಯಾ ಮಿಲ್ಲಿಯಾದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ್ದರು.
ಫಝಲ್ ನೂರಾನಿ ಅವರ ಈ ಅಮೋಘ ಸಾಧನೆಯನ್ನು ಜಾಮಿಯಾ ಮದೀನತುನ್ನೂರ್ ಅಧ್ಯಕ್ಷ ಕಾಂತಪುರಂ ಎ.ಪಿ.ಅಬೂಕರ್ ಮುಸ್ಲಿಯಾರ್ ಹಾಗೂ ಡೈರೆಕ್ಟರ್ ಡಾ.ಎ.ಪಿ.ಅಬ್ದುಲ್ ಹಕೀಂ ಅಝ್ಹರಿ ಅಭಿನಂದಿಸಿದ್ದಾರೆ.