ದ್ವಾರಕೀಶ್ ನಿಧನಕ್ಕೆ SDPI ಸಂತಾಪ

Prasthutha|

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳನ್ನು ಸಾಧಿಸಿದ್ದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯನ್ನು ಈ ಸಮಯದಲ್ಲಿ ಗೌರವಿಸುತ್ತಿದ್ದೇವೆ. ಅವರ ಅಗಲುವಿಕೆಗೆ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಸಂತಾಪ ಸೂಚಿಸುತ್ತದೆ ಎಂದು SDPI ರಾಜ್ಯಾದ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.

- Advertisement -

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ದ್ವಾರಕೀಶ್ ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ, ಹಿರಿಯ ಕಲಾವಿದನ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಸೃಷ್ಟಿಕರ್ತನು ಅನುಗ್ರಹಿಸಲಿ ಎಂದು ಬರೆದಿದ್ದಾರೆ.



Join Whatsapp