ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಣ್ಣುಮಕ್ಕಳ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ: ಐಶ್ವರ್ಯ ಮಹಾದೇವ

Prasthutha|

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೆಣ್ಣುಮಕ್ಕಳ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಐಶ್ವರ್ಯ ಮಹಾದೇವ ಹೇಳಿದ್ದಾರೆ.

- Advertisement -

ಕುಮಾರಸ್ವಾಮಿ ಅವರ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದ ಹೆಣ್ಣುಮಗಳಾಗಿ ನಾನು ಮಾತನಾಡ್ತೇನೆ. ಹೆಚ್ ಡಿಕೆ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಯಾವ ಉದ್ದೇಶದಿಂದ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಣ್ಣುಮಕ್ಕಳ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ. ಕುಮಾರಸ್ವಾಮಿಯವರದ್ದು ಇದು ಮೊದಲಲ್ಲ. ಹಿಂದೆ ಎಲ್ಲಿ ಮಲಗಿದ್ದೆ ಅಂತ ಮಹಿಳೆಗೆ ಅವಮಾನ ಮಾಡಿದ್ದರು. ಸುಮಲತಾ ಅವರ ಬಗ್ಗೆ ಏನು ಮಾತನಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಕುಮಾರಸ್ವಾಮಿ ಒಬ್ಬ ಶಾಸಕರು. ಈಗ ನಮ್ಮ ಮಂಡ್ಯದಲ್ಲೂ ಸ್ಪರ್ಧಿಸಿದ್ದಾರೆ. ಅವರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ ಎಂದು ಅವರು ನುಡಿದಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಸಂತಸದಲ್ಲಿದ್ದಾರೆ. ಬಸ್ ನಲ್ಲಿ ಫ್ರೀಯಾಗಿ ಹೂಮಾರಿ ಬರ್ತಿದ್ದಾರೆ. ಆ ಮಹಿಳೆಯರು ದಾರಿ ತಪ್ಪಿದ್ದಾರಾ ಕುಮಾರಸ್ವಾಮಿ ಅವರೇ. 2 ಸಾವಿರದಿಂದ ಮಹಿಳೆಯರು ಸ್ವಾವಲಂಬಿಯಾಗ್ತಿದ್ದಾರೆ. ಗ್ಯಾರೆಂಟಿಗಳು ಸಬಲೀಕರಣಕ್ಕೆ ದಾರಿಯಾಗಿದೆ ಎಂದರು.



Join Whatsapp