ತುಮಕೂರು: ನನ್ನ ಜೀವನದ ಸುದೀರ್ಘ ಅನುಭವವನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹಂಚಿಕೊಂಡಿದ್ದೇನೆ. ಮೋದಿ ಅವರ ಭಾಷಣದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಜಿಲ್ಲೆಯ ಕೊರಟಗೆರೆ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಸುದೀರ್ಘ ರಾಜಕೀಯದಲ್ಲಿ 15 ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. 3 ಸಾರಿ ಸೋತಿದ್ದೇನೆ. ರಾಜಕೀಯ ಚದುರಂಗದಾಟದಲ್ಲಿ ಯಾವಾಗ ಏನು ಆಗುತ್ತೆ ಊಹೆ ಮಾಡುವುದಕ್ಕೆ ಆಗಲ್ಲ ಎಂದಿದ್ದಾರೆ.
ಯಾವ ಟ್ರಿಬ್ಯೂನಲ್ ಬೆಂಗಳೂರಿಗೆ ನೀರಿಲ್ಲ ಅಂತಾ ಬರೆದಿದ್ದಾರೋ ಆ ವಿಷಯವನ್ನ ಈ ರಾಷ್ಟ್ರದ ಪ್ರಧಾನಿಗಳು ಎಲ್ಲರಿಗೂ ಮನದಟ್ಟು ಆಗುವಂತೆ ನಿನ್ನೆ ಪ್ರಸ್ತಾಪ ಮಾಡಿದ್ದಾರೆ. ಇದು ಬಹಳ ಮುಖ್ಯ. ನಾನೇನು ತುಮಕೂರಿನಲ್ಲಿ ನಿಲ್ಲಬೇಕು ಅಂತಾ ಇರಿಲಿಲ್ಲ. 2019 ಮೇ 13 ರಂದು ಘೋಷಣೆ ಮಾಡಿದ್ದೆ. ಆದರೇ ಸನ್ನಿವೇಶ ನಿಂತುಕೊಂಡೆ. ನಾನು ತುಮಕೂರಿಗೆ ನೀರು ಕೋಡುವುದಿಲ್ಲ ಅಂತೇಳಿ ನನ್ನ ಸೋಲಿಸಿದರು ಎಂದರು.