ಬಿಜೆಪಿ ಪ್ರಣಾಳಿಕೆ ಮೋದಿ ಫೋಟೋ ಆಲ್ಬಮ್ ನಂತಿದೆ: ಪ್ರಿಯಾಂಕ್ ಖರ್ಗೆ

Prasthutha|

ಕಲಬುರಗಿ: ಬಿಜೆಪಿ ಪ್ರಣಾಳಿಕೆ ಮೋದಿ ಫೋಟೋ ಆಲ್ಬಮ್ ನಂತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

- Advertisement -

ಕಲಬುರಗಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಮೋದಿ ಅವರ ಪಿಕ್ ನಿಕ್ ನ ವಿಭಿನ್ನ ಫೋಟೋಗಳು ಬಿಟ್ಟರೆ ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಶ್ರಮಿಕರಿಗೆ, ನಿರ್ಗತಿಕರಿಗೆ ಉಪಯೋಗವಾಗುವಂತಹ ಯಾವುದೇ ಅಂಶಗಳಿಲ್ಲ. ಬಿಜೆಪಿ ಪ್ರಣಾಳಿಕೆ ಈ ಹಿಂದಿನ ಅಚ್ಛೇದಿನ್ ನಿಂದ ಹಿಡಿದು ಈಗಿನ ಮೋದಿ ಕೀ ಗ್ಯಾರಂಟಿವರೆಗೆ ಬಂದಿದೆ ಎಂದರು.

ಇನ್ನು ಈ ಹಿಂದಿನ 10 ವರ್ಷಗಳ ಗ್ಯಾರಂಟಿಗಳು ಯಾರ ಗ್ಯಾರಂಟಿಗಳಾಗಿದ್ದವು? ಅವರದೇ ಗ್ಯಾರಂಟಿಗಳಾದ ಅಚ್ಛೇದಿನ್, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, 100 ಸ್ಮಾರ್ಟ್ ಸಿಟಿಗಳು, 2 ಕೋಟಿ ಉದ್ಯೋಗ ಸೃಷ್ಟಿಯ ಗ್ಯಾರಂಟಿಗಳು ಏನಾದವು? ಯಾವ ಗ್ಯಾರಂಟಿಗಳು ಅನುಷ್ಠಾನಗೊಂಡಿವೆ? ಬಿಜೆಪಿಯವರ ಗ್ಯಾರಂಟಿಗಳಿಗೆ ವಾರೆಂಟಿಯೇ ಇಲ್ಲ. ಹಾಗಾಗಿ ಜನರು ಅವರ ಗ್ಯಾರಂಟಿಗಳನ್ನು ನಂಬುವುದಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನೇ ಅವರು ನಕಲಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.



Join Whatsapp