ಅಂಚೆ ಮತದಾನಕ್ಕೆ ಮನೆಗಳಿಗೆ ತೆರಳಿದ ಚುನಾವಣಾಧಿಕಾರಿಗಳ ಜೊತೆಗೆ ಬಿಜೆಪಿ ಏಜೆಂಟ್!

Prasthutha|

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ 85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರಿಗೆ ಇಂದಿನಿಂದ ಅಂಚೆ ಮತದಾನ ಆರಂಭಗೊಂಡಿದೆ. ಆದರೆ ಅಂಚೆ ಮತದಾನದ‌ ಮೊದಲ ದಿನ ಮನೆಗಳಿಗೆ ತೆರಳಿದ ಚುನಾವಣಾಧಿಕಾರಿಗಳ ಜೊತೆಗೆ ಬಿಜೆಪಿ ಏಜೆಂಟ್ ಉಪಸ್ಥಿತರಿದ್ದರು ಎಂದು ಗಂಭೀರ ಆರೋಪದೊಂದಿಗೆ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

- Advertisement -

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳ ತಂಡವು ಮನೆಮನೆಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಏಜೆಂಟ್‌ ಒಬ್ಬನು ಚುನಾವಣಾಧಿಕಾರಿಗಳ ತಂಡದೊಂದಿಗೆ ಇರುವುದನ್ನು ಅದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಬೆಂಬಲಿಗರು, ಪತ್ತೆ ಹಚ್ಚಿದ್ದಾರೆ. ಅವರು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ.

ವೀಡಿಯೋ ಸಾಕ್ಷಿಯೊಂದಿಗೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಗೆ ಮನ್ಸೂರ್ ಅಲಿ ಖಾನ್ ಬೆಂಬಲಿಗರು ದೂರು ಸಲ್ಲಿಸಿದ್ದಾರೆ.

- Advertisement -

ಮನ್ಸೂರ್ ಅಲಿ‌ ಖಾನ್ ಸೆರೆ ಹಿಡಿದ ಸುಮಾರು ಒಂದೂವರೆ ನಿಮಿಷದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಚುನಾವಣಾಧಿಕಾರಿಗಳ ಜೊತೆಗಿದ್ದ ಬಿಜೆಪಿ ಏಜೆಂಟ್‌ ಹೆಸರು ಕಿರಣ್ ಎಂದು ಗುರುತಿಸಲಾಗಿದೆ.



Join Whatsapp