ದೇವಸ್ಥಾನದ ಭದ್ರತೆಗೆ ನಿಯೋಜನೆಯಾಗಿರುವ ಪೊಲೀಸರಿಗೆ ಅರ್ಚಕರ ವೇಷ !

Prasthutha|

ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭದ್ರತೆಗೆ ನಿಯೋಜನೆಯಾಗಿರುವ ಪೊಲೀಸರಿಗೆ ಅರ್ಚಕರ ವೇಷ ತೊಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

- Advertisement -


ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಈ ಬಗ್ಗೆ ಟ್ವೀಟ್ ಮಾಡಿ, ‘ಯಾವ ಪೊಲೀಸ್ ಕೈಪಿಡಿ ಪ್ರಕಾರ ಈ ಪೊಲೀಸರು ಅರ್ಚಕರ ವೇಷ ಧರಿಸಿದ್ದಾರೆ? ಎಂದು ಕೇಳಿದ್ದಾರೆ.ಇದಕ್ಕೆ ಉತ್ತರ ಪ್ರದೇಶ ಆಡಳಿತ ಏನು ಉತ್ತರ ನೀಡುತ್ತದೆ? ಎಂದು ಕೇಳಿರುವ ಅವರು, ಈ ಬಗ್ಗೆ ಆದೇಶ ನೀಡಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.


ಇದು ವಿವಾದವಾಗುತ್ತಿದ್ದಂತೆಯೇ ಕೆಲ ವಾಹಿನಿಗಳ ಜೊತೆ ಮಾತನಾಡಿರುವ ವಾರಾಣಸಿ ಪೊಲೀಸ್ ಆಯುಕ್ತ ಮೋಹಿತ್ ಅಗರವಾಲ್ ಅವರು, ‘ದೇವಸ್ಥಾನದಲ್ಲಿ ಕೆಲ ಭಕ್ತರ ಜೊತೆ ಪೊಲೀಸರು ಕಠಿಣವಾಗಿ ವರ್ತಿಸುತ್ತಾರೆ ಎನ್ನುವ ದೂರುಗಳು ಮತ್ತು ನಮ್ಮ ಕೆಲ ಭಕ್ತರು ಪೊಲೀಸರನ್ನೂ ತಳ್ಳಾಟ ನೂಕಾಟ ಮಾಡುತ್ತಾರೆ ಎನ್ನುವ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅರ್ಚಕರ ವೇಷ ಧರಿಸಿದರೆ ಒಂದು ಸಕಾರಾತ್ಮಕ ವಾತಾವರಣದ ಜೊತೆ ಭಕ್ತರೂ ಪೊಲೀಸರ ಮಾತು ಕೇಳುತ್ತಾರೆ ಎನ್ನುವ ದೃಷ್ಟಿಯಿಂದ ಈ ರೀತಿ ಆದೇಶ ನೀಡಲಾಗಿದೆ. ಅಲ್ಲದೇ ಪೊಲೀಸರನ್ನು ತಳ್ಳುವುದು ನೂಕುವುದು ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

- Advertisement -



Join Whatsapp