ದಕ್ಷಿಣ ಕೊರಿಯಾ: ಇಲ್ಲಿನ ಖ್ಯಾತ -ಪಾಪ್ ಸಿಂಗರ್ ಪಾರ್ಕ್ ಬೋ ರಾಮ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. 30 ವರ್ಷದ ಕೆ-ಪಾಪ್ ಸಿಂಗರ್ ಪಾರ್ಕ್ ಬೋ ರಾಮ್ ಚಿಕ್ಕ ವಯಸ್ಸಲ್ಲೇ ದಕ್ಷಿಣ ಕೊರಿಯಾ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಪ್ರಖ್ಯಾತಿ ಪಡೆದಿದ್ದರು.
ರಾಮ್ ಸಾವಿಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಸುಮಾರು 10 ವರ್ಷಗಳಿಂದ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ರಾಮ್ ಮುಂದಿನ ದಿನಗಳಲ್ಲಿ ಹೊಸ ಮ್ಯೂಸಿಕ್ ರಿಲೀಸ್ ಮಾಡಲು ತಯಾರಿ ನಡೆಸುತ್ತಿದ್ದರು.
ನಮ್ಯಾಂಗ್ಜು ಪೊಲೀಸ್ ಠಾಣೆಯ ಅಧಿಕಾರಿಗಳು ಸಿಂಗರ್ ಪಾರ್ಕ್ ಬೋ ರಾಮ್ ಸಾವಿಗೂ ಮುನ್ನ ಸ್ನೇಹಿತರ ಜೊತೆ ಪಾರ್ಟಿಯಲ್ಲಿದ್ದರು ಎಂದು ತಿಳಿಸಿದ್ದಾರೆ. ಇಬ್ಬರು ಸ್ನೇಹಿತರ ಜೊತೆ ರಾಮ್ ಮದ್ಯಪಾನ ಮಾಡಿದ್ದರು. ಪಾರ್ಟಿಯಲ್ಲಿ ತೊಡಗಿದ್ದಾಗಲೇ ರಾತ್ರಿ 9.55ರ ಸುಮಾರಿಗೆ ವಾಶ್ ರೂಂಗಾಗಿ ರಾಮ್ ಹೋಗಿದ್ದಾರೆ. ಆದರೆ ತುಂಬಾ ಸಮಯದ ನಂತರ ರಾಮ್ ಬಂದಿರಲಿಲ್ಲ. ಅನುಮಾನದಿಂದ ಆಕೆಯನ್ನು ಹುಡುಕುತ್ತಾ ಹೋದ ಗೆಳೆಯರಿಗೆ, ವಾಶ್ ಬೇಸನ್ ಬಳಿ ರಾಮ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಹಾನ್ಯಾಂಗ್ ಯೂನಿವರ್ಸಿಟಿ ಗುರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾತ್ರಿ 11.17ರ ಸುಮಾರಿ ವೈದ್ಯರು ಪಾರ್ಕ್ ಬೋ ರಾಮ್ ಸಾವನ್ನಪ್ಪಿರುವುದು ಖಚಿತಪಡಿಸಿದ್ದಾರೆ.