ಬೆಳ್ತಂಗಡಿ: ತುಮಕೂರು ಕೋರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರವಾಗಿ ಹತ್ಯೆಯಾದ ಉಜಿರೆಯ ಸಾಹುಲ್ ಹಮೀದ್, ಮದ್ದಡ್ಕ ಇಸಾಕ್, ಸಿದ್ದೀಕ್ ಶಿರ್ಲಾಲ್ ಎಂಬ 3 ಅಮಾಯಕ ವ್ಯಕ್ತಿಗಳ ನ್ಯಾಯಕ್ಕಾಗಿ ಸ್ಪೀಕರ್ ಯು.ಟಿ. ಖಾದರ್ ರವರನ್ನು ಭೇಟಿ ಮಾಡಿ ಹಂತಕರಿಗೆ ಸೂಕ್ತ ಶಿಕ್ಷೆ ಆಗುವಂತೆ ಮತ್ತು ಕುಟುಂಬಕ್ಕೆ ಪರಿಹಾರ ಒದಗಿಸಲು ಅಗ್ರಹಿಸಲಾಯಿತು.
ನಿಯೋಗದ ಅಹವಾಲು ಸ್ವೀಕರಿಸಿದ ಸ್ಪೀಕರ್ ಖಾದರ್ ಸುಮಾರು ಒಂದು ಗಂಟೆಗಳ ಕಾಲ ಕುಟುಂಬ ಸದಸ್ಯರನ್ನೊಳಗೊಂಡ ನಿಯೋಗದೊಂದಿಗೆ ಚರ್ಚಿಸಿದರು. ಅಡ್ವಕೇಟ್ ಜನರಲ್ ಹಾಗೂ ತುಮಕೂರು ಎಸ್ ಪಿಯವರಿಗೆ ಕರೆ ಮಾಡಿ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಲು ಮತ್ತು ಸ್ಪೆಷಲ್ ಕೋರ್ಟ್ ಮುಖಾಂತರ ಕೋರ್ಟ್ ಕಲಾಪ ನಡೆಸಿ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾರಿಸ್ ಸೆಂಟ್ರಲ್ ಕಮೀಟಿ ಬೆಂಗಳೂರು ಸಂಚಾಲಕರಾದ ಶಬೀರ್ ಬ್ರಿಗೇಡ್, ಸುಹೈಲ್ ಕಂದಕ್, ಹನೀಫ್ ಖಾನ್ ಕೊಡಾಜೆ ಮತ್ತು ಮೃತರ ಕುಟುಂಬಿಕರು ಹಾಜರಿದ್ದರು.